Tuesday, July 14, 2026
Homeಕರಾವಳಿಉಡುಪಿಕಾರ್ಕಳ : ತೆಂಗಿನಕಾಯಿ ತೆಗೆಯಲು ಹೋದ ವ್ಯಕ್ತಿ ತೋಡಿಗೆ ಬಿದ್ದು ಸಾವು

ಕಾರ್ಕಳ : ತೆಂಗಿನಕಾಯಿ ತೆಗೆಯಲು ಹೋದ ವ್ಯಕ್ತಿ ತೋಡಿಗೆ ಬಿದ್ದು ಸಾವು

- Advertisement -
- Advertisement -

ಕಾರ್ಕಳ : ತೆಂಗಿನಕಾಯಿ ತೆಗೆಯಲು ಹೋದ ವ್ಯಕ್ತಿ ತೋಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ ನಡೆದಿದೆ . ಶೀನ‌ (77) ಮೃತ ದುರ್ದೈವಿ .

ಶೀನ ಇವರು ಕೃಷಿ ಕೆಲಸ ಮಾಡಿಕೊಂಡಿದ್ದು, ಬೆಳಿಗ್ಗೆ 10.45 ಗಂಟೆಗೆ ತೆಂಗಿನ ಕಾಯಿ ಹಾಗೂ ಸೀಯಾಳ ಕೊಯ್ಯಲು ದೋಂಟಿ ತೆಗೆದುಕೊಂಡು ನೀಲಬೈಲು ಎಂಬಲ್ಲಿಗೆ ಹೋದವರು ಸಂಜೆಯಾದರೂ ವಾಪಾಸ್ಸು ಬರಲಿಲ್ಲ. ಹುಡುಕಿದಾಗ ಅವರ ಮೃತ ದೇಹವು ಗದ್ದೆ ಬದಿಯ ತೋಡಿನ ನೀರಿನಲ್ಲಿ ತೇಲುತ್ತಿತ್ತು. 

ತೆಂಗಿನ ಕಾಯಿ ಕೊಯ್ಯುವಾಗ ಆಕಸ್ಮಿಕವಾಗಿ ತೋಡಿನ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.ಪೊಲೀಸರು ವಿಚಾರಣೆ ನಡೆಸಿದ್ದಾರೆ.

- Advertisement -

Latest News

error: Content is protected !!