Wednesday, June 3, 2026
Homeಕರಾವಳಿಉಡುಪಿಉಡುಪಿ: ಜಡ್ಕಲ್ ಸಮೀಪದ ಕಾನ್ಕಿಯ ನಡುರಸ್ತೆಯಲ್ಲಿ ಗೋವಿನ ತಲೆ ಪತ್ತೆ

ಉಡುಪಿ: ಜಡ್ಕಲ್ ಸಮೀಪದ ಕಾನ್ಕಿಯ ನಡುರಸ್ತೆಯಲ್ಲಿ ಗೋವಿನ ತಲೆ ಪತ್ತೆ

- Advertisement -
- Advertisement -

ಉಡುಪಿ: ಜಡ್ಕಲ್ ಸಮೀಪದ ಕಾನ್ಕಿಯ ನಡುರಸ್ತೆಯಲ್ಲಿ ಗೋವಿನ ತಲೆ ಪತ್ತೆಯಾದ ಪರಿಣಾಮ ಬೈಂದೂರಿನಲ್ಲಿ ಮತ್ತೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಗೋವಿನ ರುಂಡ ಪತ್ತೆಯಾದ ಸ್ಥಳಕ್ಕೆ ತಡರಾತ್ರಿ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಭೇಟಿ ನೀಡಿ ಪರಿಶೀಲಿಸಿ, ಆಕ್ರೋಶ ಹೊರ ಹಾಕಿದ್ರು.

ಇದೇ ವೇಳೆ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ ಶಾಸಕರು ಗೋ ಹಂತಕರನ್ನು ಶೀಘ್ರವಾಗಿ ಬಂಧಿಸುವಂತೆ ಆಗ್ರಹಿಸಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಹಿಂದೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ.  ಪೊಲೀಸರ ಮೇಲೆ ಒತ್ತಡ ಹೇರಿ ಕ್ರಮ ಕೈಗೊಳ್ಳದಂತೆ ಕಟ್ಟಿ ಹಾಕುವ ಮೂಲಕ ಕಾಂಗ್ರೆಸ್‌ ಸರ್ಕಾರ ಬೆನ್ನಹಿಂದೆ ನಿಂತು ಗೋ ಹಂತಕರನ್ನು ಪೋಷಿಸುತ್ತಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಹಿಂದೂ ಸಮಾಜ ತಿರುಗಿ ಬೀಳುವ ಮುನ್ನ ಗೋ ಹಂತಕರನ್ನು ಬಂಧಿಸಬೇಕು ಎಂದು ಶಾಸಕರು ಆಗ್ರಹಿಸಿದರು.

- Advertisement -

Latest News

error: Content is protected !!