- Advertisement -
- Advertisement -
ಮುಂಬೈ: ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ನಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಸಂಜಯ್ ಮತ್ತು ಕರೀಷ್ಮಾಗೆ ಇಬ್ಬರು ಮಕ್ಕಳಿದ್ದು , ಎರಡನೇ ಪತ್ನಿ ಪ್ರಿಯಾ ಅವರಿಂದ ಒಂದು ಮಗುವಿದೆ.
ಸಂಜಯ್ ಅವರು ಪೊಲೋ ಗೇಮ್ನ ಆಡುತ್ತಿದ್ದಾಗ ಏಕಾಏಕಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಆ ಬಳಿಕ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ. ಅವರು ಇಂಗ್ಲೆಂಡ್ನಲ್ಲಿ ನಿಧನ ಹೊಂದಿದ್ದಾರೆ. ಈ ವಿಚಾರವನ್ನು ಅವರ ಆಪ್ತೆ ಸುಹೇಲ್ ಸೇಠ್ ಅವರು ಖಚಿತಪಡಿಸಿದ್ದಾರೆ. ಸಂಜಯ್ ಕಪೂರ್ ಅವರು ಹಲವು ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಸೋನಾ ಕಾಮ್ಸ್ಟಾರ್ ಕಂಪನಿಗೆ ಅವರು ಅಧ್ಯಕ್ಷರಾಗಿದ್ದಾರೆ.
- Advertisement -