- Advertisement -
![]()
- Advertisement -
ಮಂಗಳೂರು; ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕುತ್ತಾರಿನ ಸಿಲಕೋನಿಯಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಯೆನಪೋಯಾ ವೈದ್ಯಕೀಯ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಗಳಾಗಿರುವ ಡಾ.ಮಮ್ತಾಝ್ ಅಹ್ಮದ್ ಹಾಗೂ ಡಾ. ಕಮ್ರಾಜ್ ದಂಪತಿಯ ಪುತ್ರಿ ಹಿಬಾ ಐಮನ್ (15) ಮೃತ ದುರ್ದೈವಿ.
ವೈದ್ಯ ದಂಪತಿ ನಿನ್ನೆ ರಾತ್ರಿ ಆಸ್ಪತ್ರೆಯ ತುರ್ತು ನಿಗಾಘಟಕದಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಮನೆಯಲ್ಲಿದ್ದ ಹಿಬಾ ಬಾಲ್ಕನಿಯಲ್ಲಿ ಸ್ಟೂಲ್ ಇಟ್ಟು ಬೆಡ್ ಒಣಗಿಸಲು ಯತ್ನಿಸಿದ್ದಾಳೆ. ಆಗ ಆಯ ತರಪ್ಪಿ ಬಿದ್ದು ಸಾವನ್ನಪ್ಪಿದ್ದಾಳೆ. ಯೆನಪೋಯ ಶಾಲೆಯಲ್ಲಿ 10 ತರಗತಿ ಓದುತ್ತಿದ್ದ ಹಿಬಾ ತಂದೆ ತಾಯಿ ಸಹೋದರನನ್ನು ಅಗಲಿದ್ದಾಳೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
- Advertisement -


