Friday, June 26, 2026
Homeತಾಜಾ ಸುದ್ದಿಇಂದು ಸ್ವಿಡ್ಜರ್ಲೆಂಡ್ ನ ಜಿನೇವಾದಲ್ಲಿ ಕಾಂತಾರ ಸಿನಿಮಾ ಪ್ರದರ್ಶನ

ಇಂದು ಸ್ವಿಡ್ಜರ್ಲೆಂಡ್ ನ ಜಿನೇವಾದಲ್ಲಿ ಕಾಂತಾರ ಸಿನಿಮಾ ಪ್ರದರ್ಶನ

- Advertisement -
- Advertisement -

ಬೆಂಗಳೂರು: ವಿಶ್ವದಾದ್ಯಂತ ಸದ್ದು ಮಾಡಿರುವ ಕಾಂತಾರ ಸಿನಿಮಾ ಇಂದು ಸ್ವಿಡ್ಜರ್ಲೆಂಡ್ ನ ಜಿನೇವಾದಲ್ಲಿ ಪ್ರದರ್ಶನಗೊಳ್ಳಲಿದೆ.

ಇಂದು ಸಂಜೆ ಜಿನೇವಾದ ಕಾಲಮಾನದ ಪ್ರಕಾರ ಸಂಜೆ 6.30ಕ್ಕೆ ಹಾಲ್ ಸಂಖ್ಯೆ 13ರ ಪಾಥೆ ಬಾಲೆಕ್ಸರ್ಟ್ ನಲ್ಲಿ ಕಾಂತಾರ ಚಿತ್ರ ಪ್ರದರ್ಶನವಾಗಲಿದೆ. ಇನ್ನುಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ, ಪರ್ಮನೆಂಟ್ ಮಿಷನ್ ಆಫ್ ಟು ದಿ ಯು ಎನ್ ಹಾಗೂ ಕೆಲವು ಅಂತರಾಷ್ಟ್ರೀಯ ಸಂಸ್ಥೆಗಳು ಆಯೋಜಿಸಿರುವ ಈ ಪ್ರದರ್ಶನದಲ್ಲಿ ನಟ ರಿಷಭ್ ಶೆಟ್ಟಿ ಕೂಡಾ ಪಾಲ್ಗೊಳ್ಳಲಿದ್ದಾರೆ.

ಚಿತ್ರ ಪ್ರದರ್ಶನದ ನಂತರ ರಿಷಭ್ ಶೆಟ್ಟಿ ಔತಣಕೂಟದಲ್ಲಿ ಭಾಗವಹಿಸಿ ಕಾಂತಾರ ಚಿತ್ರದ ಕುರಿತು ಮಾತನಾಡಲಿದ್ದಾರೆ ಎನ್ನಲಾಗಿದೆ.ಸ್ವಿಡ್ಜರ್ಲ್ಯಾಂಡ್ ನ ಜಿನೇವಾ ನಗರದಲ್ಲಿ ಕಳೆದ ಕೆಲವು ದಿನಗಳಿಂದ ವಿಶ್ವಸಂಸ್ಥೆಯ ವಾರ್ಷಿಕ ಸಭೆ ನಡೆಯುತ್ತಿದ್ದು,  ಇದರಲ್ಲಿ ಪಾಲ್ಗೊಂಡಿರುವ ರಿಷಭ್ ಶೆಟ್ಟಿ ಪರಿಸರ ಸಂರಕ್ಷಣೆ ಕುರಿತು ಕನ್ನಡದಲ್ಲಿ ಮಾತನಾಡಿದ್ದಾರೆ.

- Advertisement -

Latest News

error: Content is protected !!