Thursday, June 4, 2026
Homeತಾಜಾ ಸುದ್ದಿಭಾರೀ ಅನಾಹುತವೊಂದರಿಂದ ಅದೃಷ್ಟವಶಾತ್ ಪಾರಾದ ಕನ್ನಡತಿಯ ಹರ್ಷ

ಭಾರೀ ಅನಾಹುತವೊಂದರಿಂದ ಅದೃಷ್ಟವಶಾತ್ ಪಾರಾದ ಕನ್ನಡತಿಯ ಹರ್ಷ

- Advertisement -
- Advertisement -

ಬೆಳಗಾವಿ: ಕನ್ನಡತಿ ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ ಅವರು ಭಾರೀ ಅನಾಹುತವೊಂದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

 ಇಂದು ಬೆಳಗಾವಿಯ ಕಾಲೇಜ್‌ವೊಂದರಲ್ಲಿ ಭೇಟಿ ನೀಡುವ ವೇಳೆ ತಾವು ಪ್ರಯಾಣ ಬೆಳೆಸಬೇಕಾಗಿದ್ದು, ವಾಹನದ ಮೇಲೆ ವಿದ್ಯುತ್ ಕಂಬ ಬಿದ್ದು, ವಾಹನ ಜಖಂ ಆಗಿದೆ. ಅದೃಷ್ಟವಶಾತ್​ ಕಿರಣ್ ರಾಜ್ ಮತ್ತು ತಂಡ ಅಪಾಯದಿಂದ ಪಾರಾಗಿದ್ದಾರೆ ಅಂತ ತಿಳಿದು ಬಂದಿದೆ.

ಈ ಬಗ್ಗೆ ಅವರು ತಮ್ಮ ಇನ್‌ಸ್ಟ್ರಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, ಅವರು ಹಾಯ್ ಎಲ್ಲರಿಗೂ ನಮಸ್ಕಾರ, ಈ ದಿನ ಇಷ್ಟು ಕಾಲೇಜ್ಗಳಿಗೆ ಹೋಗುವುದಿತ್ತು, ಬಹುಶಃ ದೃಷ್ಟಿ ಜಾಸ್ತಿನೆ ಆಗಿರಬೇಕು ಅನ್ಸುತ್ತೆ, ಹಾಗಾಗಿ ಈ ತರ ಅನಿರೀಕ್ಷಿತ ಘಟನೆ ಸಂಭವಿಸಿದ ಕಾರಣ, ಕೊನೆ ಕ್ಷಣದಲ್ಲಿ ನಮ್ಮ ಪ್ಲಾನ್ ಚೆಂಜ್ ಮಾಡಬೇಕಾಯಿತು.. ದೇವರ ದಯೆಯಿಂದ ಟೀಮ್ ಅವರಿಗೆ ಯಾವುದೆ ಹಾನಿಯಾಗಿಲ್ಲ, ಎಲ್ಲರೂ ಆರಾಮಾಗಿ ಇದ್ದಾರೆ. ದಯಮಾಡಿ ಕ್ಷಮೆ ಇರಲಿ, ನಿಮ್ಮ ಪ್ರೀತಿ ವಿಶ್ವಾಸ ಸದಾ ನಮ್ಮ ಮೇಲಿರಲಿ, ಮಿಸ್ ಮಾಡದೆ ಸಿನಿಮಾ ನೋಡಿ ಹರಸಿ ಹಾರೈಸಿ ಅಂತ ಹೇಳಿದ್ದಾರೆ.

- Advertisement -

Latest News

error: Content is protected !!