Wednesday, June 3, 2026
Homeಕರಾವಳಿಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರೆಂಜಾಳ ಎಡ್ಯಾರ ಮನೆಯ ಯುವರಾಜ್ ಜೈನ್ ಹೃದಯಾಘಾತದಿಂದ ನಿಧನ !

ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರೆಂಜಾಳ ಎಡ್ಯಾರ ಮನೆಯ ಯುವರಾಜ್ ಜೈನ್ ಹೃದಯಾಘಾತದಿಂದ ನಿಧನ !

- Advertisement -
- Advertisement -

ಕಾರ್ಕಳ : ಕರಾವಳಿ ಕಂಬಳ ಕ್ಷೇತ್ರದಲ್ಲಿ ಹಲವಾರು ಸಾಧನೆ ಮಾಡಿರುವ ಕಾರ್ಕಳ ತಾಲೂಕಿನ ರೆಂಜಾಳ ಎಡ್ಯಾರ ಮನೆಯ ಯುವರಾಜ್ ಜೈನ್ (65) ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಿನ್ನೆ ಬಂಟ್ವಾಳದ ಹೊಕ್ಕಾಡಿಗೋಳಿಯಲ್ಲಿ ನಡೆದ ಕಂಬಳದಲ್ಲಿ ಭಾಗವಹಿಸಿ ಕಿರಿಯ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದರು.

ಕಳೆದ ಮೂವತ್ತು ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಅಪ್ರತಿಮ ಕಲಾವಿದ ಇವರು . ಜೋಡುಕರೆ ಕಂಬಳದಲ್ಲಿ ಅಡ್ಡ ಹಲಗೆಯ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಮೃತರು ಪತ್ನಿ , ನಾಲ್ವರು ಹೆಣ್ಣು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ .

- Advertisement -

Latest News

error: Content is protected !!