Sunday, May 5, 2024
Homeಕರಾವಳಿಉಡುಪಿಮುಂಬೈ ಸಾಫ್ಟ್ ವೇರ್ ಉದ್ಯಮಿ ಉಡುಪಿಯಲ್ಲಿ ನಾಪತ್ತೆ !

ಮುಂಬೈ ಸಾಫ್ಟ್ ವೇರ್ ಉದ್ಯಮಿ ಉಡುಪಿಯಲ್ಲಿ ನಾಪತ್ತೆ !

spot_img
- Advertisement -
- Advertisement -

ಮಲ್ಪೆ: ಹೋಟೆಲ್ ಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಸಾಫ್ಟ್ ವೇರ್ ಉದ್ಯೋಗಿ ನಾಪತ್ತೆಯಾಗಿದ್ದಾರೆ.
ಈ ಘಟನೆ ಮಲ್ಪೆಯಲ್ಲಿ ನಡೆದಿದೆ.

ಅಮಿತ್ ಭಂಡಾರಿ ( 30 ) ನಾಪತ್ತೆಯಾದ ವ್ಯಕ್ತಿ. ಇವರು ಮುಂಬೈಯಲ್ಲಿ ಕಂಪ್ಯೂಟರ್ ಸಾಫ್ಟ್ ವೇರ್ ಉದ್ಯೋಗದಲ್ಲಿ ಇದ್ದರು, ಮದುವೆ ಕಾರ್ಯಕ್ರಮದ ನಿಮಿತ್ತ 10 ದಿನಗಳ ಹಿಂದೆ ಊರಿಗೆ ಬಂದಿದ್ದರು.

ರಾತ್ರಿ 8.30 ರ ಸುಮಾರಿಗೆ ಹೋಟೆಲ್ ಗೆ ಹೋಗಿ ಊಟ ಮಾಡಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಇಲ್ಲಿಯವರೆಗೂ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವವರ ತಂದೆ ಜಯ ಭಂಡಾರಿ ಅವರು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!