- Advertisement -
- Advertisement -
ಕಾರ್ಕಳ: ಕಂಬಳ ಕ್ಷೇತ್ರದ ಸಾಧಕ ಕಾರ್ಕಳ ತಾಲೂಕಿನ ರೆಂಜಾಳ ಪಂಜಾಳದ ಸತೀಶ್ ಶೆಟ್ಟಿ (62) ಅವರು ಶುಕ್ರವಾರ (ಎ.17) ನಿಧನ ಹೊಂದಿದರು.1980ರಿಂದ 1990ರ ವರಗೆ ಕಂಬಳ ಓಟಗಾರರಾಗಿ, 1996ರಿಂದ 2010ರ ವರೆಗೆ ಕೋಣಗಳನ್ನು ಗಂತಿನಲ್ಲಿ ಬಿಡಿಸುವ ಪ್ರಸಿದ್ದ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದರು.ಅಲ್ಲದೇ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದ ಅವರು ಪಂಚಾಯತ್ ಸದಸ್ಯರೂ ಆಗಿದ್ದರು.ಸತೀಶ್ ಶೆಟ್ಟಿ ಅವರು ಕೆಲವು ಸಮಯದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು.ಮೃತರು ಪತ್ನಿ ಓರ್ವ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.
- Advertisement -