Saturday, April 20, 2024
Homeಕರಾವಳಿಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೋವಿಡ್ ಪರಿಹಾರನಿಧಿಗೆ 5 ಕೋಟಿ ರೂ ದೇಣಿಗೆ

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೋವಿಡ್ ಪರಿಹಾರನಿಧಿಗೆ 5 ಕೋಟಿ ರೂ ದೇಣಿಗೆ

spot_img
- Advertisement -
- Advertisement -

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ, ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕೋವಿಡ್-19 ಚಿಕಿತ್ಸೆಗಾಗಿ ಪ್ರಧಾನಮಂತ್ರಿಗಳು ಪ್ರಾರಂಭಿಸಿರುವ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ರೂ. 5 ಕೋಟಿ ದೇಣಿಗೆಯನ್ನು ಇಂದು ಮಂಜೂರು ಮಾಡಿರುತ್ತಾರೆ. ಅದರಂತೆ ಮೊತ್ತ ರೂ. 5 ಕೋಟಿಯನ್ನು ವರ್ಗಾವಣೆ ಮಾಡಲಾಗಿದೆಯೆಂದು ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್ ಮಂಜುನಾಥ್‍ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ತೊಂದರೆಗೀಡಾದವರಿಗೆ ಯೋಜನೆಯಿಂದ ಸಹಾಯ :
ರಾಜ್ಯದಾದ್ಯಂತ ಘೋಷಿಸಲಾಗಿರುವ ಲಾಕ್‍ಡೌನ್‍ನಿಂದ ತೊಂದರೆಗೊಳಗಾಗಿರುವ ಕುಟುಂಬಗಳಿಗೆ ಸ್ಥಳೀಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿರುವ ನೆರವಿನ ಹಸ್ತವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಗಳು ಅಲ್ಲಲ್ಲಿ ನೀಡುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಬೀದಿಯಲ್ಲಿರುವ ದನ, ನಾಯಿ ಮುಂತಾದ ಪ್ರಾಣಿಗಳಿಗೆ ಆಹಾರ ಒದಗಣೆ, ಉಡುಪಿಯಲ್ಲಿ ಕೂಲಿ ಕಾರ್ಮಿಕರಿಗೆ ರಾತ್ರಿ ಊಟದ ಒದಗಣೆ, ಬೆಂಗಳೂರಿನಲ್ಲಿ ಸರ್ವೇ ಕಾರ್ಯಕರ್ತರಿಗೆ ಮಧ್ಯಾಹ್ನ ಊಟದ ಒದಗಣೆ, ಇನ್ನೂ ಹಲವೆಡೆಗಳಲ್ಲಿ ಆಹಾರ, ಸಾಮಗ್ರಿಗಳನ್ನು ಯೋಜನೆಯು ಒದಗಿಸುತ್ತಿದ್ದು, ತೊಂದರೆಗೊಳಗಾದವರು ಸಹಾಯದ ಅಗತ್ಯವಿದ್ದಲ್ಲಿ ಸ್ಥಳೀಯ ಸೇವಾಪ್ರತಿನಿಧಿಯನ್ನು ಸಂಪರ್ಕಿಸಬೇಕೆಂದು ಕಾರ್ಯನಿರ್ವಾಹಕ ನಿರ್ದೇಶಕರು ಕೋರಿರುತ್ತಾರೆ.

ಸ್ವಉದ್ಯೋಗಕ್ಕೆ ಸಹಾಯ :
ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಕುಶಲಕರ್ಮಿಗಳು ಗ್ರಾಮಗಳಿಗೆ ಹಿಂದಿರುಗಿರುವ ಸಂದರ್ಭದಲ್ಲಿ ಆದಾಯ ಗಳಿಸಲು ಸ್ವಉದ್ಯೋಗ ಮಾಡುವರೇ ಯೋಜನೆಯು ಸಹಾಯ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದಕ್ಕಾಗಿ ತುರ್ತು ಯಂತ್ರ ಒದಗಣೆ, ದುಡಿಯುವ ಬಂಡವಾಳ ಒದಗಣೆ, ಮಾರುಕಟ್ಟೆ ಒದಗಣೆಯ ಕಾರ್ಯಕ್ರಮವನ್ನು ಯೋಜನೆಯು ಪ್ರಾರಂಭಿಸಿದೆ. ಅಗತ್ಯವಿರುವ ಫಲಾನುಭವಿಗಳು ಯೋಜನೆಯ ಸ್ವಸಹಾಯ ಸಂಘದ ಸದಸ್ಯರಾಗಿರಲೇಬೇಕೆಂಬ ನಿಯಮವಿರುವುದಿಲ್ಲ. ಸ್ಥಳೀಯ ಸೇವಾಪ್ರತಿನಿಧಿಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಪಡಕೊಳ್ಳಬೇಕೆಂದು ಡಾ| ಎಲ್.ಎಚ್. ಮಂಜುನಾಥ್ ಸೂಚಿಸಿರುತ್ತಾರೆ.

ಸ್ವಸಹಾಯ ಸಂಘಗಳ ಸದಸ್ಯರಿಗೆ ತುರ್ತು ಸಾಲ ಯೋಜನೆ :
ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಕೋವಿಡ್ ಸಮಸ್ಯೆಯಿಂದ ಉಂಟಾಗಿರುವ ಆರ್ಥಿಕ ಆಘಾತವನ್ನು ನಿಯಂತ್ರಿಸಲು ಯೋಜನೆಯು ತನ್ನ ಸ್ವಸಹಾಯ ಸಂಘಗಳ ಮುಖಾಂತರ ತುರ್ತು ಸಾಲ ಯೋಜನೆಯನ್ನು ಪ್ರಾರಂಭಿಸಿದೆ. ‘ಕೋವಿಡ್ ಪರಿಹಾರ ತುರ್ತುಸಾಲ’ ಎಂಬ ಹೆಸರಿನ ಯೋಜನೆಯಲ್ಲಿ ಸಂಘದ ಸದಸ್ಯರುಗಳಗೆ ಗರಿಷ್ಠ ರೂ. 25,000/- ದವರೆಗೆ ಕಚ್ಛಾ ಸಾಮಗ್ರಿ ಖರೀದಿ, ದುಡಿಯುವ ಬಂಡವಾಳ ಒದಗಣೆ, ಯಂತ್ರೋಪಕರಣ ಖರೀದಿ ಅಥವಾ ಮನೆವಾರ್ತೆ ಖರ್ಚಿಗಾಗಿ ಈ ಮೊತ್ತವನ್ನು ತುರ್ತಾಗಿ ಪಡೆಯಬಹುದಾಗಿದೆ. ಸಂಘಗಳಿಂದ ಈ ಹಿಂದೆ ಸಾಲ ಪಡಕೊಂಡವರು ಮೊತ್ತ ಚಾಲ್ತಿಯಲ್ಲಿದ್ದಾಗ್ಯೂ ಈ ವಿಶೇಷ ನೆರವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಸರಕಾರವು ಸಲಹೆ ನೀಡಿದಂತೆ ನಿಗಾ ವಹಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಂಘದ ಸಭೆ ನಡೆಸಿ, ನಿರ್ಣಯವನ್ನು ಸೇವಾಪ್ರತಿನಿಧಿಗೆ ನೀಡಿದಲ್ಲಿ ಅಗತ್ಯ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಿಸಿಕೊಡಲಾಗುವುದು.

- Advertisement -
spot_img

Latest News

error: Content is protected !!