Sunday, June 7, 2026
Homeಅಪರಾಧಧರ್ಮಸ್ಥಳ: ಕಳೆಂಜ ಸರಕಾರಿ ಜಾಗದಲ್ಲಿ ಕಾಡು ಹಂದಿ ಬೇಟೆ :ಬಂದೂಕು‌,ಗುಂಡು ವಶಕ್ಕೆ; ಆರೋಪಿ ಪರಾರಿ

ಧರ್ಮಸ್ಥಳ: ಕಳೆಂಜ ಸರಕಾರಿ ಜಾಗದಲ್ಲಿ ಕಾಡು ಹಂದಿ ಬೇಟೆ :ಬಂದೂಕು‌,ಗುಂಡು ವಶಕ್ಕೆ; ಆರೋಪಿ ಪರಾರಿ

- Advertisement -
- Advertisement -

ಬೆಳ್ತಂಗಡಿ : ಅಕ್ರಮವಾಗಿ ಕಾಡು ಹಂದಿಯನ್ನು ಬಂದೂಕಿನಿಂದ ಗುಂಡು ಹಾರಿಸಿ ಕೊಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕುಡ್ತಲಾಜೆ ಸರಕಾರಿ ಜಾಗದಲ್ಲಿ ಅಗಸ್ಟ್ ಒಂಬತ್ತರಂದು ನಡೆದಿದೆ.

ಈ ಬಗ್ಗೆ ಕಳೆಂಜ ಶಾಖೆಯ ಉಪವಲಯ ಅರಣ್ಯಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾಹಿತಿ ಸಿಕ್ಕಿದ್ದು ತಕ್ಷಣ ಘಟನಾ ಸ್ಥಳಕ್ಕೆ ತೆರಳಿದಾಗ ಒಂದು ಕಾಡು ಹಂದಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಪಕ್ಕದಲ್ಲಿ ಒಂದು ಪರವಾನಿಗೆ ಇದ್ದ ಬಂದೂಕು, ಮೂರು ಸಜೀವ ಗುಂಡು, ಒಂದು ಉಪಯೋಗಿಸಿದ ಗುಂಡು ಪತ್ತೆಯಾಗಿದ್ದು ಆರೋಪಿ ಸುಜಯ್ ಗೌಡ ಸ್ಥಳದಿಂದ ಪರಾರಿಯಾಗಿದ್ದಾನೆ.

ಸಾವನ್ನಪ್ಪಿದ ಹಂದಿಯನ್ನು ಸ್ಥಳ ಮಹಜರು ನಡೆಸಿ ಕಾನೂನು ರೀತಿಯಲ್ಲಿ ದಫನ ಮಾಡಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಬಂದೂಕು ಹಾಗೂ ಗುಂಡು ಪತ್ತೆಯಾದ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಬುಧವಾರ ಸಂಜೆ ಸುಜಾಯ್ ಗೌಡ ನ ಮೇಲೆ 3 r/w25(1B), 30 arms act ಅಡಿಯಲ್ಲಿ ಅರಣ್ಯ ಅಧಿಕಾರಿಗಳು ದೂರು ನೀಡಿದ್ದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

- Advertisement -

Latest News

error: Content is protected !!