Monday, May 6, 2024
Homeಕರಾವಳಿಬೆಳ್ತಂಗಡಿ : ಕಳೆಂಜ ಅರಣ್ಯ ಭೂಮಿಯಲ್ಲಿ ರಾಜಕೀಯ ಜಟಾಪಟಿ ಪ್ರಕರಣ: ಹಕ್ಕುಬಾಧ್ಯತಾ ಸಮಿತಿ ಸಭೆಯಲ್ಲಿ ಘಟನೆಯ...

ಬೆಳ್ತಂಗಡಿ : ಕಳೆಂಜ ಅರಣ್ಯ ಭೂಮಿಯಲ್ಲಿ ರಾಜಕೀಯ ಜಟಾಪಟಿ ಪ್ರಕರಣ: ಹಕ್ಕುಬಾಧ್ಯತಾ ಸಮಿತಿ ಸಭೆಯಲ್ಲಿ ಘಟನೆಯ ವಿಡಿಯೋ ದಾಖಲೆ ಪರಿಶೀಲನೆ

spot_img
- Advertisement -
- Advertisement -

ಬೆಳ್ತಂಗಡಿ : ಕಳೆಂಜದ ಮೀಸಲು ಅರಣ್ಯ ಪ್ರದೇಶದ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿದ್ದನ್ನು ತೆರವುಗೊಳಿಸಲು ಉಪ್ಪಿನಂಗಡಿ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾದಾಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಎಮ್.ಎಲ್.ಸಿ ಪ್ರತಾಪ್ ಸಿಂಹ ನಾಯಕ್ ನಡೆದ ಜಟಾಪಟಿ ಪ್ರಕರಣ ಹಕ್ಕುಬಾಧ್ಯತಾ ಸಮಿತಿಗೆ ನೀಡಲಾಗಿದ್ದು. ಇದರ ಮೊದಲ ಸಭೆ ಜನವರಿ 5 ರಂದು ಶಾಸಕರ ಭವನ ಕಟ್ಟಡ -1 ರ ನಾಲ್ಕನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗನದಲ್ಲಿ ನಡೆಯಿತು. ಇಂದು ಘಟನೆಯ ವಿಡಿಯೋ ದಾಖಲೆ ಪರಿಶೀಲನೆ ನಡೆಯಲಿದೆ.

ಸಭೆಗೆ ಉಪ್ಪಿನಂಗಡಿ ಅರಣ್ಯಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕರೆದು ಹೇಳಿಕೆ ಪಡೆದುಕೊಂಡು ಹಕ್ಕುಬಾಧ್ಯತಾ ಸಮಿತಿ. ಇನ್ನೂ ಜ.11 ರಂದು (ಇಂದು) ನಡೆಯುವ ಸಭೆಯಲ್ಲಿ ಪ್ರತಾಪ್ ಸಿಂಹ ನಾಯಕ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ನಡೆದ ಜಟಾಪಟಿಯ ವಿಡಿಯೋ ದಾಖಲೆ ಹಕ್ಕುಬಾಧ್ಯತಾ ಸಮಿತಿ ಪರಿಶೀಲನೆ ನಡೆಸಲಿದೆ.

ಹಕ್ಕುಬಾಧ್ಯತಾ ಸಮಿತಿ ಸದಸ್ಯರು: ವಿಧಾನ ಪರಿಷತ್ತಿನ ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷರಾಗಿ ಎಂ.ನಾಗರಾಜ್ ಮತ್ತು ಸದಸ್ಯರುಗಳಾಗಿ  ಉಮಾಶ್ರೀ, ಪ್ರದೀಶ್ ಶೆಟ್ಟರ್, ಆ.ದೇವೇಗೌಡ, ಬೆಳ್ತಂಗಡಿ ಎಮ್.ಎಲ್.ಸಿ ಹರೀಶ್ ಕುಮಾರ್ , ಕೆ.ಎ.ತಿಪ್ಪೇಸ್ವಾಮಿ, ಭೀಮರಾವ್ ಬಸವರಾಜ ಪಾಟೀಲ್ , ಡಾ|ಡಿ.ತಿಮ್ಮಯ್ಯ, ಅರುಣ್ ಡಿ.ಎಸ್ ಆಯ್ಕೆಯಾಗಿದ್ದಾರೆ.

ಘಟನೆಯ ವಿವರ: ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಅಮ್ಮಿನಡ್ಕದ ಅರಣ್ಯ ಇಲಾಖೆಗೆ ಸೇರಿದ ಮೀಸಲು ಅರಣ್ಯ ಪ್ರದೇಶದ ಜಾಗದಲ್ಲಿ ಲೋಲಾಕ್ಷ ಎಂಬಾತ ಅಕ್ರಮವಾಗಿ ಮನೆ ನಿರ್ಮಿಸಲು ಫೌಂಡೇಷನ್ ಹಾಕಿದ್ದು ಅದನ್ನು ಉಪ್ಪಿನಂಗಡಿ ಅರಣ್ಯ ಇಲಾಖೆ ಆಕ್ಟೋಬರ್ 6 ರಂದು ಕಿತ್ತೆಸಗಿದ್ದು ಇದರ ಮಾಹಿತಿ ಪಡೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಆಕ್ಟೋಬರ್ 7 ರಂದು ಸ್ಥಳಕ್ಕೆ ಬಂದು  ಸ್ಥಳೀಯರ ಸಹಕಾರದೊಂದಿಗೆ ಮನೆ ನಿರ್ಮಿಸಿ ಗೃಹಪ್ರವೇಶ ಮಾಡಿಹೋಗಿದ್ದರು. ಇದರ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಅಕ್ಟೋಬರ್ 9 ರಂದು ತೆರವು ಮಾಡಲು ಮುಂದಾದಾಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾಹಿತಿ ತಿಳಿದು ದಕ್ಷಿಣ ಕನ್ನಡದ ಬಿಜೆಪಿ ಶಾಸಕರು ಹಾಗೂ ಎಮ್.ಎಲ್.ಸಿ ಪ್ರತಾಪ್ ಸಿಂಹ ನಾಯಕ್ ಘಟನಾ ಸ್ಥಳಕ್ಕೆ ಬಂದು ಮನೆ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದರು. ಅರಣ್ಯಾಧಿಕಾರಿ ಎಸಿಎಫ್ ಸುಬ್ಬಯ್ಯ ನಾಯ್ಕ್ ಮತ್ತು ಎಮ್.ಎಲ್.ಸಿ ಪ್ರತಾಪ್ ಸಿಂಹ ನಾಯಕ್ ನಡುವೆ ಕೈ ಕೈ ಹಿಡಿದು ನೂಕಾಟ ನಡೆದಿತ್ತು. ಈ ವೇಳೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ ಕೆ ಗೆ ಅವಾಚ್ಯ ಶಬ್ದದಿಂದ ನಿಂದನೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದರು.

- Advertisement -
spot_img

Latest News

error: Content is protected !!