Friday, May 17, 2024
Homeಅಪರಾಧತವರು ಮನೆಯಿಂದ ಹಣ ತರುವಂತೆ ಪತ್ನಿಗೆ ಮಾನಸಿಕ, ದೈಹಿಕ ಹಿಂಸೆ; ಆರೋಪಿ ಪತಿ ಸೇರಿದಂತೆ ಕುಟುಂಬಸ್ಥರ...

ತವರು ಮನೆಯಿಂದ ಹಣ ತರುವಂತೆ ಪತ್ನಿಗೆ ಮಾನಸಿಕ, ದೈಹಿಕ ಹಿಂಸೆ; ಆರೋಪಿ ಪತಿ ಸೇರಿದಂತೆ ಕುಟುಂಬಸ್ಥರ ವಿರುದ್ಧ ದೂರು ದಾಖಲು

spot_img
- Advertisement -
- Advertisement -

ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ನಂದಾವರ ಎಂಬಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತವರು ಮನೆಯಿಂದ ಹಣ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಆರೋಪಿಗಳನ್ನು ಉಮ್ಮರ್ ಫಾರೂಕ್, ಮುಸ್ತಫ, ರಿಯಾಝ್, ಮೊಹಮ್ಮದ್ ಅಲಿಯಾಸ್ ಬಡ್ಡಿ ಮೊಹಮ್ಮದ್, ದುಲೈಕಾ, ಅಸ್ಮಾ ಹರ್ಷಿದಾ ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ಮಹಿಳೆ ಬಿ.ಬಿ. ಫಾತಿಮಾ.

ಘಟನೆಯ ವಿವರ: ದಿನಾಂಕ 30-12-2023 ರಂದು ಆರೋಪಿ ಉಮ್ಮರ್ ಫಾರೂಕ್ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ ಮೂರು ಬಾರಿ ತಲಾಕ್ ಹೇಳಿ ರಕ್ತ ಬರುವಂತೆ ಹೊಡೆದು, ನೀನು ನನಗೆ ಬೇಡ ನಾನು ಬೇರೆ ಮದುವೆಯಾಗುತ್ತೇನೆ ಎಂದು ಎದರಿಸುತ್ತಿದ್ದ ಎಂದು ಫಾತಿಮಾ ತಿಳಿಸಿದ್ದಾರೆ. 05-07-2009ರಂದು ಫಾತಿಮಾರವರು ಉಮ್ಮರ್ ಫಾರೂಕ್‌ರನ್ನು ಅಲ್ ಖಜಾನ್ ಹಾಲ್ ತಲಪಾಡಿಯಲ್ಲಿ ಸಂಪ್ರದಾಯದಂತೆ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ 5 ಲಕ್ಷ ರೂ. ಹಾಗೂ 63 ಪವನ್ ಚಿನ್ನವನ್ನು ವರದಕ್ಷಿಣೆಯಾಗಿ ನೀಡಲಾಗಿದ್ದು ಮದುವೆ ಬಳಿಕ ಆರೋಪಿಯು ತವರು ಮನೆಯಿಂದ ಹೆಚ್ಚಿನ ಹಣವನ್ನು ತಂದು ಕೊಡುವಂತೆ ಪ್ರತಿದಿನ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆನಡೆಸುತ್ತಿದ್ದನು.

ಗಂಡ ಹೊಡೆಯುವ ಸಮಯ ನಾದಿನಿ ದುಲೈಕಾ ಹಾಗೂ ಮುಸ್ತಫಾ ಹೆಂಡತಿ ಹರ್ಷಿದಾ ಕೂಡ ಕುಮ್ಮಕ್ಕು ನೀಡುತ್ತಿದ್ದರು. ನಾದಿನಿ ದುಲೈಕಾ ಫಾತಿಮಾ ಅವರ ಗಂಡನಿಗೆ ಕೋಲು ತಂದು ಕೊಡುತ್ತಿದ್ದಳು. ಗಂಡ ಉಮ್ಮರ್ ಫಾರೂಕ್ ಅಮಲು ಪದಾರ್ಥ ಸೇವಿಸಿ ಬಂದು ಫಾತಿಮಾಳಿಗೆ ತಲೆಗೆ, ಎದೆಗೆ ಹೊಡೆದು, ಇಸ್ತ್ರಿ ಪೆಟ್ಟಿಗೆಯಲ್ಲಿ ಮೈಯನ್ನು ಸುಟ್ಟಿರುತ್ತಾನೆ. ಉಮ್ಮರ್ ಫಾರೂಕ್ ಸಹೋದರರಾದ ಮುಸ್ತಫಾ, ರಿಯಾಜ್ ಫಾತಿಮಾಳಿಗೆ ಹಣಕೊಡುವಂತೆ ಒತ್ತಾಯಿಸುತ್ತಿದ್ದು ಇಲ್ಲವಾದರೆ ತಂದೆಯ ಮರ್ಯಾದೆ ತೆಗೆಯುವುದಾಗಿ ಬೆದರಿಸುತ್ತಿದ್ದರು. ಇನ್ನು ಗಂಡನ ಅಣ್ಣ ಮೊಹಮ್ಮದ್, ಗಂಡ ಮನೆಯಲ್ಲಿಲ್ಲದಾಗ ರೂಮಿಗೆ ಪ್ರವೇಶಿಸಿ ಅಸಭ್ಯವಾಗಿ ವರ್ತಿಸುತ್ತಿದ್ದರು. ಬಳಿಕ ಫಾತಿಮಾ ತನ್ನ ತಂದೆಯ ಬಳಿ ತಿಳಿಸಿದಾಗ ನಂದಾವರದಲ್ಲಿ ಫ್ಲ್ಯಾಟ್ ಖರೀದಿಸಿ ನೀಡಿರುತ್ತಾರೆ. ಅಲ್ಲಿಗೆ ಆರೋಪಿಗಳಾದ ಉಮ್ಮರ್ ಫಾರೂಕ್ ಹಾಗೂ ಮನೆಯವರು ಬಂದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾರೆ ಎಂದು ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿರುತ್ತಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!