Thursday, June 4, 2026
Homeಕರಾವಳಿಮಂಗಳೂರು ; ಹಣದ ವಿಚಾರದಲ್ಲಿ ಸಹೋದರರನ್ನು ಅಪಹರಿಸಿದ ಪ್ರಕರಣ; ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಮಂಗಳೂರು ; ಹಣದ ವಿಚಾರದಲ್ಲಿ ಸಹೋದರರನ್ನು ಅಪಹರಿಸಿದ ಪ್ರಕರಣ; ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಪುತ್ತೂರು; ಹಣದ ವಿಚಾರದಲ್ಲಿ ಕಡಬದ ನಿವಾಸಿಗಳಾದ ಶಾರೂಕ್ ಹಾಗೂ ಅವರ ಸಹೋದರ ನಿಜಾಮುದ್ದೀನ್ ಅವರನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಉಪ್ಪಿನಂಗಡಿಯ ಅಬೂಬಕ್ಕರ್ ಸಿದ್ದಿಕ್(39), ಬಂಟ್ವಾಳದ ಕಲಂದರ್ ಶಾಫಿ(22), ದೇರಳಕಟ್ಟೆಯ ಇರ್ಫಾನ್(38), ಪಾಂಡೇಶ್ವರದ ರಿಯಾಜ್(33) ಮತ್ತು ಬೆಳ್ತಂಗಡಿಯ ಇರ್ಷಾದ್(28) ಬಂಧಿತರು.

ದುಬೈನಲ್ಲಿರೋ ನಿಜಾಮುದ್ದೀನ್ ಸಂಬಂಧಿ ಶಫೀಕ್ ಅವರ ವಿಚಾರದಲ್ಲಿ ಅಪಹರಣ ಮಾಡಲಾಗಿದೆ ಎನ್ನಲಾಗಿದೆ. ಶಫೀಕ್ ಗೋಲ್ಡ್ ಬಿಸ್ಕಟ್ ವ್ಯವಹಾರ ‌ನಡೆಸುತ್ತಿದ್ದು ಅದರ ಮಾಹಿತಿ ಪಡೆಯಲು ಅಪಹರಣ ಮಾಡಿದ್ದಾರೆ ಎನ್ನಲಾಗಿದೆ.ಗೋಲ್ಡ್ ಬಿಸ್ಕಿಟ್ ಮತ್ತು ಹಣ ದೋಚಲು ಶಾರೂಕ್ ಮತ್ತು ನಿಜಾಮುದ್ದೀನ್ ಅಪಹರಣ ಮಾಡಲಾಗಿದೆ. ಆದರೆ ಗೋಲ್ಡ್ ಬಿಸ್ಕಿಟ್ ವ್ಯವಹಾರದ ಬಗ್ಗೆ ಈ ಇಬ್ಬರಿಗೂ ಮಾಹಿತಿ ಇರಲಿಲ್ಲ.ಕೊನೆಗೆ ‌ನಿಜಾಮುದ್ದೀನ್ ಬಿಡುಗಡೆ ಮಾಡಿ ಶಾರೂಕ್ ಅಪಹರಿಸಿದ್ದರು ಆರೋಪಿಗಳು.

ಶಾರೂಕ್ ಅವರನ್ನು ಅಪಹರಿಸಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅರ್ಕುಳ ಬಳಿ ಅನುಮಾನ ಬಂದ ಹಿನ್ನೆಲೆ ಮಂಗಳೂರು ಗ್ರಾಮಾಂತರ ಪೊಲೀಸರು ತಪಾಸಣೆ ನಡೆಸಿದ್ದಾರೆ.ಈ ವೇಳೆ ಪೊಲೀಸರಿ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಕೊನೆಗೂ ಟ್ರೇಸ್ ಮಾಡಿ ಬಂಧಿಸಿದಾಗ ಅಪಹರಣ ವಿಚಾರ ಬೆಳಕಿಗೆ ಬಂದಿದೆ. ಇನ್ನು ರೌಡಿಶೀಟರ್ ತಲ್ಲತ್ ಫೈಝಲ್ ನಗರ ಸೂಚನೆಯಂತೆ ಅಪಹರಣ ಮಾಡಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!