Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಹೈ ಪ್ರೊಫೈಲ್ ಗಾಂಜಾ ಪ್ರಕರಣ;  ಇಬ್ಬರು ವೈದ್ಯರು ಸೇರಿ ಮತ್ತೆ 9 ಜನರನ್ನು ಬಂಧಿಸಿದ...

ಮಂಗಳೂರಿನಲ್ಲಿ ಹೈ ಪ್ರೊಫೈಲ್ ಗಾಂಜಾ ಪ್ರಕರಣ;  ಇಬ್ಬರು ವೈದ್ಯರು ಸೇರಿ ಮತ್ತೆ 9 ಜನರನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮಂಗಳೂರಿನಲ್ಲಿ ಹೈಪ್ರೊಫೈಲ್ ಗಾಂಜಾ ಕೇಸ್ ಗೆ ಸಂಬಂಧಪಟ್ಟಂತೆ ಪೊಲೀಸರು ಮತ್ತೆ ಇಬ್ಬರು ವೈದ್ಯರು ‌ಮತ್ತು ಏಳು ಮಂದಿ ವೈದ್ಯ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಶ್ರೀನಿವಾಸ ಆಸ್ಪತ್ರೆಯ ಕರ್ನಾಟಕದ ವೈದ್ಯ ಡಾ‌.ಸಿದ್ದಾರ್ಥ್ ಪವಸ್ಕರ್(29) ಮತ್ತು ದುರ್ಗಾ ಸಂಜೀವಿನಿ ಆಸ್ಪತ್ರೆಯ ಕರ್ನಾಟಕದ ವೈದ್ಯ ಡಾ.ಸುಧೀಂದ್ರ(34) ಸೇರಿದಂತೆ ಕೆ.ಎಂ.ಸಿ ಮೆಡಿಕಲ್ ಕಾಲೇಜಿನ ಏಳು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದ ವಿದುಶ್ ಕುಮಾರ್(27), ದೆಹಲಿಯ ಶರಣ್ಯ(23), ಕೇರಳದ ಸೂರ್ಯಜಿತ್ ದೇವ್(20), ಕೇರಳದ ಆಯೇಷಾ ಮಹಮ್ಮದ್(23), ತೆಲಂಗಾಣದ ಪ್ರಣಯ್ ನಟರಾಜ್(24), ತೆಲಂಗಾಣದ ಚೈತನ್ಯಾ(23), ಉತ್ತರ ಪ್ರದೇಶದ ಇಶ್ ಮಿದ್ದ(24) ಬಂಧಿತ ವಿದ್ಯಾರ್ಥಿಗಳು.

ಏಳು ಮಂದಿ ವಿದ್ಯಾರ್ಥಿಗಳೂ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿಗಳಾಗಿದ್ದಾರೆ. ಈ 9 ಜನರ ಬಂಧನದಿಂದಾಗಿ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ.

- Advertisement -

Latest News

error: Content is protected !!