Monday, June 8, 2026
Homeಕರಾವಳಿಉಡುಪಿಮಂಗಳೂರು: ಹೈದರಾಬಾದ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾ ಕೂಟ 2022ಕ್ಕೆ ಕೆ.ಸದಾನಂದ್ ಪ್ರಭು ಆಯ್ಕೆ

ಮಂಗಳೂರು: ಹೈದರಾಬಾದ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾ ಕೂಟ 2022ಕ್ಕೆ ಕೆ.ಸದಾನಂದ್ ಪ್ರಭು ಆಯ್ಕೆ

- Advertisement -
- Advertisement -

ಉಡುಪಿ ಅಜ್ಜರಕಾಡಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ” 41 ನೇ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ ಮೀಟ್ 2021-22ರಲ್ಲಿ 60+ ವಿಭಾಗದಲ್ಲಿ 5000 ಮೀಟರ್ ದೂರವನ್ನು ಕೇವಲ 32.39 ನಿಮಿಷಗಳಲ್ಲಿ ಕ್ರಮಿಸಿ ಚಿನ್ನದ ಪದಕಗಳಿಸಿದ ದ.ಕ ಜಿಲ್ಲೆಯನ್ನು ಪ್ರತಿನಿಧಿಸಿದ ಮಂಗಳೂರು ನಗರದ ಡೊಂಗರಕೇರಿ ವಾರ್ಡಿನ ನಿವಾಸಿ ಕೆ.ಸದಾನಂದ್ ಪ್ರಭುರವರಿಗೆ ಇಂದು ಸನ್ಮಾನಿಸಲಾಯಿತು.

ನಗರದ ಮಣ್ಣಾಗುಡ್ಡೆಯಲ್ಲಿರುವ ವಿಫೇಶ್ ಬೇಕರಿಯ ಮುಂಭಾಗದಲ್ಲಿ 42 ನೇ ಡೊಂಗರಕೇರಿ ವಾರ್ಡ್ ಕಾಂಗ್ರೆಸ್ ಸಮಿತಿಯ ವತಿಯಿಂದ ಸನ್ಮಾನ ಮಾಡಿ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಯನ್ನ ಶ್ಲಾಘಿಸಲಾಯಿತು .

ಈ ಮೂಲಕ ಪ್ರಭುರವರು 2022 ರ ಫೆಬ್ರವರಿಯಲ್ಲಿ ಹೈದರಾಬಾದ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದು ಅಲ್ಲಿಯೂ ಸಹ ಅವರು ಚಿನ್ನದ ಪದಕ ಗೆದ್ದು ಬರಲಿ ಎಂದು ಹಾರೈಸಿದರು.

- Advertisement -

Latest News

error: Content is protected !!