Sunday, May 19, 2024
Homeತಾಜಾ ಸುದ್ದಿತಮಿಳಿನ​ ಖ್ಯಾತ ನಟನನ್ನು ಮದುವೆಯಾಗಲಿರುವ ಬ್ಯಾಡ್ಮಿಂಟನ್​ ತಾರೆ ಜ್ವಾಲಾ ಗುಟ್ಟಾ!

ತಮಿಳಿನ​ ಖ್ಯಾತ ನಟನನ್ನು ಮದುವೆಯಾಗಲಿರುವ ಬ್ಯಾಡ್ಮಿಂಟನ್​ ತಾರೆ ಜ್ವಾಲಾ ಗುಟ್ಟಾ!

spot_img
- Advertisement -
- Advertisement -

ಚೆನ್ನೈ: ತಮಿಳು ನಟ ವಿಷ್ಣು ವಿಶಾಲ್ ಹಾಗೂ ಭಾರತೀಯ ಬ್ಯಾಡ್ಮಿಂಟನ್ ಡಬಲ್ಸ್ ಪಟು ಜ್ವಾಲಾ ಗುಟ್ಟಾ ನಡುವಣ ಡೇಟಿಂಗ್ ಬಗ್ಗೆ ಕೆಲವು ಸಮಯಗಳ ಹಿಂದಿನಿಂದಲೇ ಗಪ್ ಚುಪ್ ಸುದ್ದಿಗಳು ಹರಡುತ್ತಲೇ ಇದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಲು ಕಾಲಿವುಡ್ ಸ್ಟಾರ್ ನಿರಾಕರಿಸಿದ್ದರು. ಆದರೆ ಕಳೆದ ಶುಕ್ರವಾರ ನಟ ವಿಷ್ಣು ವಿಶಾಲ್​ 36ನೇ ಹುಟ್ಟಹಬ್ಬ ಆಚರಿಸಿಕೊಂಡಿದ್ದು, ಈ ಸಮಯದಲ್ಲಿ ಗೆಳತಿ ಜ್ವಾಲಾ ಗುಟ್ಟಾ ವಿಷ್ಣು ಮನೆಗೆ ಆಗಮಿಸಿ ಕೇಕ್​ ಕತ್ತರಿಸಿ ಬರ್ತಡೇ ಸಂಭ್ರಮ ಆಚರಿಸಿರುವ ಫೋಟೋಗಳನ್ನು ಟ್ವಿಟರ್​ನಲ್ಲಿ ಫುಲ್ ವೈರಲ್ ಆಗಿದೆ.

ಶೀಘ್ರದಲ್ಲೇ ಈ ಜೋಡಿ ಮದುವೆ ಆಗುವ ತಯಾರಿ ಮಾಡಿಕೊಳ್ಳುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಮದುವೆ ಪ್ಲ್ಯಾನ್​ ಮಾಡಿರುವುದಾಗಿ ಸಂದರ್ಶನದಲ್ಲಿ ಜ್ವಾಲಾ ಸಹ ಬಹಿರಂಗಪಡಿಸಿದ್ದರು.

ಜ್ವಾಲಾ ಗುಟ್ಟಾ ಮತ್ತು ಚೇತನ್ ಆನಂದ್

ಇವರಿಬ್ಬರಿಗೂ ಇದು ಎರಡನೇ ಮದುವೆ:
ಇಲ್ಲಿ ಗಮನಾರ್ಹ ಅಂಶವೆಂದರೆ ಇಬ್ಬರು ಖಾಸಗಿ ಜೀವನದಲ್ಲಿ ವೈಮನಸ್ಸು ಉಂಟಾಗಿ ವೈಯಕ್ತಿಕ ಬದುಕುಗಳಿಂದ ವಿಚ್ಛೇದನ ಪಡೆದವರಾಗಿದ್ದಾರೆ. ಮಾಜಿ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕಧಾರಿ ಜ್ವಾಲಾ ಗುಟ್ಟಾ, ಬ್ಯಾಡ್ಮಿಂಟನ್ ಪಟು ಚೇತನ್ ಆನಂದ್‌ರನ್ನು 2005ರಲ್ಲಿ ವಿವಾಹವಾಗಿದ್ದರು. ಆದರೆ ದಾಂಪತ್ಯದಲ್ಲಿ ವಿರಹ ಉಂಟಾಗಿ 2011ರಲ್ಲಿ ವಿಚ್ಛೇದನ ಪಡೆದಿದ್ದರು. ಈ ಮಧ್ಯೆ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಜೊತೆಗಿನ ಗಾಸಿಪ್ ಸುದ್ದಿಗಳು ಹರಡಿದ್ದವು.

ವಿಷ್ಣು ವಿಶಾಲ್ ಮತ್ತು ರಜನಿ ನಟರಾಜ್

ಅತ್ತ 2011ರಲ್ಲಿ ಹೆಸರಾಂತ ತಮಿಳು ನಟ ಕೆ ನಟರಾಜಿ ಪುತ್ರಿ ರಜನಿ ನಟರಾಜ್‌ರನ್ನು ವಿಷ್ಣು ವಿಶಾಲ್ ವಿವಾಹವಾಗಿದ್ದರು. 2017ರಲ್ಲಿ ಆರ್ಯನ್ ಎಂಬ ಮಗುವಿಗೆ ಅಪ್ಪನಾಗಿದ್ದರು. ಆದರೆ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ 2018ರಲ್ಲಿ ಪತ್ನಿಗೆ ವಿಚ್ಛೇದನ ನೀಡಿದ್ದರು. ‘ರಾಕ್ಷಸನ್’ ತಮಿಳು ಚಿತ್ರದ ಮೂಲಕ ವಿಷ್ಣು ಹೆಚ್ಚಿನ ಗಮನ ಸೆಳೆದಿದ್ದರು. ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ಅನೇಕ ನಟಿಗಳ ಜತೆಗೆ ಗಾಸಿಪ್ ಸುದ್ದಿಗಳು ಹರಡಿದ್ದವು.

- Advertisement -
spot_img

Latest News

error: Content is protected !!