Saturday, June 13, 2026
Homeಮನರಂಜನೆರಾಕಿಂಗ್ ಸ್ಟಾರ್ ಪುತ್ರನಿಗಿಂದು ಮೊದಲ ಹುಟ್ಟುಹಬ್ಬದ ಸಂಭ್ರಮ..

ರಾಕಿಂಗ್ ಸ್ಟಾರ್ ಪುತ್ರನಿಗಿಂದು ಮೊದಲ ಹುಟ್ಟುಹಬ್ಬದ ಸಂಭ್ರಮ..

- Advertisement -
- Advertisement -

ಬೆಂಗಳೂರು: ತೆರೆ ಮೇಲೆ ಮೇಲೆ ಸೂಪರ್ ಹಿಟ್ ಅಂತಾ ತೋರಿಸಿಕೊಂಡು ನಿಜ ಜೀವನದಲ್ಲೂ ನಾವೇ ಹಂಗೇನೇ ಅಂತಾ ಬದುಕ್ತಾ ಇರೋರು ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರು. ಮುದ್ದಾದ ಇಬ್ಬರು ಮಕ್ಕಳೊಂದಿಗೆ ಸ್ಟಾರ್ ನಟ ಹಾಗೂ ನಟಿ ಇಬ್ಬರೂ ಅತ್ಯಂತ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ.

ಇಂದು ಈ ದಂಪತಿಗೆ ತುಂಬಾನೇ ಸ್ಪೆಷಲ್ ದಿನ. ಅದಕ್ಕೆ ಕಾರಣ ಏನ್ ಗೊತ್ತಾ ರಾಧಿಕಾ ಹಾಗೂ ಯಶ್ ಅವರು ಇಂದು ತಮ್ಮ ಮಗನ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಯೆಸ್.. ಇತ್ತೀಚೆಗಷ್ಟೇ ರಾಕಿಂಗ್ ಕಪಲ್ ತಮ್ಮ ಮಗನಿಗೆ ಯಥರ್ವ್ ಅಂತಾ ನಾಮಕರಣ ಮಾಡಿದ್ದರು. ಶಾಸ್ತ್ರೋಕ್ತವಾಗಿ ಮಗನಿಗೆ ಹೆಸರಿಟ್ಟಿದ್ದರು. ಇದೀಗ ಈ ಕಂದಮ್ಮನಿಗೆ ಮೊದಲ ವರ್ಷದ ಬರ್ತಡೇ.

ಹೌದು.. ಯಥರ್ವ ಇಂದು ತನ್ನ ಫಸ್ಟ್ ಬರ್ತಡೇನಾ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾನೆ. ಹಾಗಾಗಿ ರಾಧಿಕಾ ತಮ್ಮ ಮುದ್ದು ಕಂದಮ್ಮನಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ಮಗನ ಕ್ಯೂಟ್ ಫೋಟೋಗಳನ್ನು ಶೇರ್ ಮಾಡಿಕೊಂಡು “Happy birthday to the one who will always, forever be my baby boy. Love u” ಅಂತಾ ಬರೆದುಕೊಂಡಿದ್ದಾರೆ. ಇನ್ನು ಅಭಿಮಾನಿಗಳು ಕೂಡ ಪುಟಾಣಿ ಸೆಲೆಬ್ರೆಟಿಗೆ ವಿಶ್ ಮಾಡುತ್ತಿದ್ದಾರೆ.

ಇನ್ನು ಯಶ್ ದಂಪತಿ ಮಗನ ಬರ್ತಡೇನಾ ಯಾವ ರೀತಿ ಆಚರಿಸ್ತಾರೆ? ಯಾವಾಗ ಆಚರಿಸ್ತಾರೆ ಅನ್ನೋ ಮಾಹಿತಿ ಸಿಕ್ಕಿಲ್ಲ. ಒ್ಟಟಿನಲ್ಲಿ ನಮ್ಮ ಕಡೆ ಇಂದಾನೂ ಪುಟಾಣಿಗೆ ಹ್ಯಾಪಿ ಬರ್ತಡೇ…

- Advertisement -

Latest News

error: Content is protected !!