Sunday, May 12, 2024
Homeಕರಾವಳಿಭೂಗತ ಪಾತಕಿ ವಿಕ್ಕಿ ಶೆಟ್ಟಿ ಬಲಗೈ ಬಂಟ ರೌಡಿಶೀಟರ್ ಶರಣ್ ಪೂಜಾರಿಗೆ ಎನ್ ಕೌಂಟರ್...

ಭೂಗತ ಪಾತಕಿ ವಿಕ್ಕಿ ಶೆಟ್ಟಿ ಬಲಗೈ ಬಂಟ ರೌಡಿಶೀಟರ್ ಶರಣ್ ಪೂಜಾರಿಗೆ ಎನ್ ಕೌಂಟರ್ ಭೀತಿ!…

spot_img
- Advertisement -
- Advertisement -

ಮಂಗಳೂರು : ಕರಾವಳಿಯ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಬಲಗೈ ಬಂಟ ಮಂಗಳೂರಿನ ನಟೋರಿಯಸ್ ರೌಡಿಶೀಟರ್ ಅಕಾಶ್ ಭವನ ಶರಣ್ ಯಾನೆ ಶರಣ್ ಪೂಜಾರಿಗೆ ವಿಚಾರಣೆ ನೆಪದಲ್ಲಿ ಪೊಲೀಸರು ಎನ್ಕೌಂಟರ್ ಮಾಡು ವ ಭೀತಿಇದೆ ಎನ್ನಲಾಗಿದೆ.ಇದಕ್ಕಾಗಿ ಆತ ತನ್ನ ವಕೀಲರ ಮೂಲಕ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಿಂದ ಬಂಟ್ವಾಳ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಪತ್ರ ಬರೆದಿದ್ದಾನೆ.

ಇತ್ತೀಚೆಗೆ ಬಂಟ್ವಾಳದಲ್ಲಿ ಕೊಲೆಯಾದ ತುಳು ಚಿತ್ರನಟ,ರೌಡಿ ಶೀಟರ್ ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣದಲ್ಲಿ ಶರಣ್ ಸ್ನೇಹಿತರ ಪಾತ್ರ ಇದ್ದು ಅವರನ್ನು ವಿಚಾರಣೆಗೆ ಒಳಪಡಿಸಿದ್ದು ಅದರ ಭಾಗವಾಗಿ ಶರಣ್ ಇವರ ಸಂಪರ್ಕದಲ್ಲಿ ಇದ್ದ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಬಂಟ್ವಾಳ ಪೊಲೀಸರು ನ್ಯಾಯಲಯದಲ್ಲಿ ಬಾಡಿವಾರೆಂಟ್ ಪಡೆದು ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ತೆರಳಿ ವಶಕ್ಕೆ ಪಡೆಯಲು ಮುಂದಾಗಿದ್ದರು ಆದರೆ ಶರಣ್ ನನಗೆ ಪೊಲೀಸರು ವಿಚಾರಣೆಗೆ ಕರೆದೊಯ್ಯುವ ನೆಪದಲ್ಲಿ ಎನ್ ಕೌಂಟರ್ ಮಾಡುತ್ತಾರೆ ತನ್ನ ವಕೀಲರ ಮೂಲಕ ಎಂದು ಪತ್ರ ಬರೆದು ಹಾಕಿದ್ದಾ‌ನೆ.

ಶರಣ್ ನ್ಯಾಯಧೀಶರಿಗೆ ಬರೆದ ಪತ್ರದಲ್ಲಿ ಏನಿದೆ..!

“ನಾನು ಕೆಲ ಮೊಕದ್ದಮೆಯ ಭಾಗವಾಗಿ ಸರಿಸುಮಾರು ಎರಡು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿರುತ್ತೇನೆ. ಹೀಗಿರುವಾಗ ಇತ್ತೀಚಿಗೆ ಮಂಗಳೂರಿನಲ್ಲಿ ಬೇರೆ ಯಾವುದೋ ವೈಷಮ್ಯಗಳಿಂದ ಹತ್ಯೆಯೊಂದು ನಡೆದಿರುತ್ತದೆ‌ ಅದರೆ ಇಲ್ಲಿ ತುಂಬಾ ಅಘಾತಕಾರಿ ವಿಷಯವೆಂದರೆ ಅ ಹತ್ಯೆ ಕೇಸಿನ ಭಾಗವಾಗಿ ನನ್ನನ್ನು ವಿಚಾರಣೆ ಪಡೆಯಲಿಕ್ಕಾಗಿ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳು ಬಂದಿರುತ್ತಾರೆ. ಮಾನ್ಯರೆ ನಾನು ನ್ಯಾಯಾಂಗಕ್ಕೆ ಶಿರಸಾತಲೆಭಾಗಿ ನಡೆದುಕೊಳ್ಳುವನಾಗಿರುತ್ತೇನೆ ನ್ಯಾಯಾಂಗ ಬಂಧನದಲ್ಲಿ ಕಾನೂನು ಕಾಯ್ದೆಯ ನಿಯಾಮಗಳಿಗೆ ಬದ್ಧನಾಗಿ ನಡೆದುಕೊಳ್ಳುತ್ತೇನೆ ಇಂತಹ ನನ್ನನ್ನು ಯಾರದೊ ಕೃತ್ಯದ ಭಾಗವಾಗಿ ವಿಚಾರಣೆ ನೆಪದಲ್ಲಿ ಕಾರಗೃಹದಿಂದ ಹೊರಗೆ ಕೊಂಡೊಯ್ಯುತ್ತಿರುವುದಿದೆ ಇಲ್ಲಿ‌ ನನಗೆ ಅಂತಕದ ಸಂಗತಿಯೇನೆಂದರೆ
ನನ್ನನ್ನು ಎನ್ಕೌಂಟರ್ ಮಾಡುವ ಯೋಜನೆ ನಿಶ್ಚಲವಾಗಿ ಕಾಣುತ್ತಿದೆ.

ಹಾಗಾಗಿ ನನ್ನ ಅಂತಕವನ್ನು‌ ಮತ್ತು ನನ್ನ ಜೀವಕ್ಕೆ ಅಪಾಯವಿರುವ ವಿಚಾರವನ್ನು ಸಹಾನುಭೂತಿಯಿಂದ ಮಾನವೀಯ ಕಳಕಳಿಯಿಂದ ಪರಿಗಣಿಸಿ ದಿನಾಂಕ 29-10-2020 ರಂದು ನನ್ನನ್ನು ಸದರಿ ಕೇಸಿನ ವಿಷಯವಾಗಿ ನ್ಯಾಯಲಯಕ್ಕೆ ಹಾಜರುಪಡಿಸುವುದಕ್ಕೆ ವಿನಾಯಿತಿ ನೀಡಬೇಕೆಂದು ಹಾಗೂ ನನ್ನನ್ನು ಮುಂದಿನ ವಾಯಿದೆಗೆ ಹಾಜರುಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಈ ಮೂಲಕ ತಮ್ಮಲ್ಲಿ ಸವಿನಯದಿಂದ ಮತ್ತೊಮ್ಮೆ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ ಹಾಗೂ ನಾನು ನ್ಯಾಯಾಲಯದ ಯಾವುದೇ ಆದೇಶಗಳಿಗೆ ತಲೆಭಾಗಿ ನಡೆದುಕೊಳ್ಳುತ್ತೇನೆಂದು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ”. ಎಂದು ಶರಣ್ ವಕೀಲರ ಮೂಲಕ ಬಂಟ್ವಾಳ ನ್ಯಾಯಲಯಕ್ಕೆ ಪತ್ರ ಬರೆದು ಹಾಕಿದ್ದಾನೆ.

ಅಕಾಶ್ ಭವನ ಶರಣ್ ಪೂಜಾರಿ ಯಾರು..!
ಮಂಗಳೂರು ನಿವಾಸಿಯಾಗಿರುವ ಸದಾಶಿವ ಪೂಜಾರಿಯ ಮಗನಾದ ಅಕಾಶ್ ಭವನ ಶರಣ್ ಯಾನೆ ಶರಣ್ ಪೂಜಾರಿ ಕರಾವಳಿಯ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಬಲಗೈ ಬಂಟ ಅಗಿದ್ದಾನೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ರೌಡಿಶೀಟರ್ ಪಟ್ಟ ಪಡೆದುಕೊಂಡಿದ್ದಾನೆ.

ಮಂಗಳೂರು ಸಬ್ ಜೈಲಿನಲ್ಲಿ ನಡೆದ ಡಬ್ಬಲ್ ಮರ್ಡರ್ , ವಿಟ್ಲ ಜಲೀಲ್ ಕರೋಪಾಡಿ ಕೊಲೆ ಪ್ರಕರಣ ಸೇರಿ ಹಲವು ಪ್ರಕರಣ ಈತನ ಮೇಲಿದೆ. ಎರಡು ವರ್ಷದ ಹಿಂದೆ ಪೋಕ್ಸೋ ಪ್ರಕರಣ ಸಂಬಂಧ ಬಂಧನವಾಗಿ ಮಂಗಳೂರು ಜೈಲು ಸೇರಿದ್ದ ನಂತರ ಭದ್ರತಾ ದೃಷ್ಟಿಯಿಂದ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗೆ ಹಾಕಿದ್ದರು ಈವರೆಗೂ ಈತನಿಗೆ ಹೊರಬರಲು ಸಾಧ್ಯವಾಗಿಲ್ಲ. ಕಳೆದ ಎರಡು ಭಾರಿ ಬೆಂಗಳೂರು ಜೈಲಿಗೆ ಕರೆದೊಯ್ಯುವಾಗ ಎನ್ಕೌಂಟರ್ ಮಾಡುವ ಯೋಜನೆಯನ್ನು ಶರಣ್ ನ ಮನೆಮಂದಿ ಮಾಧ್ಯಮದ ಮೂಲಕ ಎನ್ಕೌಂಟರ್ ವಿಚಾರ ಹೊರಹಾಕಿದ್ದರು.

ಶರಣ್ ಪೂಜಾರಿ ಪತ್ರದ ಮೂಲಕ ಕೋರಿಕೆ ಸಲ್ಲಿಸಿದ್ದಕೆ ಪ್ರತಿಕ್ರಿಯೆಯಾಗಿ ಬಂಟ್ವಾಳ ಪೊಲೀಸ್ ಠಾಣೆಗೆ ಶರಣ್ ಪೂಜಾರಿ ಸೂಕ್ತ ಭದ್ರತೆಯಲ್ಲಿ ಪ್ರಯಾಣ ಬೆಳೆಸಲು ಅನುವು ಮಾಡಲಾಗಿದೆ. ಕೋರ್ಟ್ ನ್ಯಾಯಧೀಶರೊಂದಿಗೆ ಗುರುವಾರ ರಾತ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಂಟ್ವಾಳ ಪೊಲೀಸರಿಂದ ಯಾವುದೇ ತೊಂದರೆಯಾಗದಂತೆ ಲಿಖಿತ ಪತ್ರ ಬರೆಸಿ, ಶುಕ್ರವಾರ ಬೆಳಗ್ಗೆ ಶರಣ್ ನನ್ನು ಬಂಟ್ವಾಳ ಪೊಲೀಸರ ಜೊತೆ ಐದು ದಿನ ಪೊಲೀಸ್ ಕಸ್ಟಡಿಗೆ ಕರೆದೊಯ್ಯಲು ಆದೇಶ ಮಾಡಿದೆ. ಅದರಂತೆ ಪರಪ್ಪನ ಅಗ್ರಹಾರ ಜೈಲಿನಿಂದ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಪೊಲೀಸ್ ಭದ್ರತೆಯಲ್ಲಿ ಬಂಟ್ವಾಳ ಪೊಲೀಸ್ ಠಾಣೆಗೆ ಪ್ರಯಾಣ ಬೆಳೆಸಿದ್ದಾರೆ‌ ಎಂದು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!