Wednesday, July 15, 2026
Homeಕರಾವಳಿಉಡುಪಿಉಡುಪಿ: ಲಾಡ್ಜ್ ನಲ್ಲಿ ಕಿರಿಯ ಆರೋಗ್ಯ ವೀಕ್ಷಣಾಧಿಕಾರಿ ಶವ ಪತ್ತೆ

ಉಡುಪಿ: ಲಾಡ್ಜ್ ನಲ್ಲಿ ಕಿರಿಯ ಆರೋಗ್ಯ ವೀಕ್ಷಣಾಧಿಕಾರಿ ಶವ ಪತ್ತೆ

- Advertisement -
- Advertisement -

ಉಡುಪಿ: ಕಿರಿಯ ಆರೋಗ್ಯ ವೀಕ್ಷಣಾಧಿಕಾರಿ ಲಾಡ್ಜ್ ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನಲ್ಲಿ ನಡೆದಿದೆ.

ಕುಂದಾಪುರ ತಾಲೂಕು ಕೊರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯಾಗಿದ್ದ ಶಿವಮೊಗ್ಗ ಮೂಲದ ಪ್ರಶಾಂತ್ (37) ಮೃತಪಟ್ಟವರಾಗಿದ್ದಾರೆ.ಮದ್ಯ ಸೇವನೆಯ ಚಟ ಹೊಂದಿದ್ದ ಪ್ರಶಾಂತ್ ಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಇತ್ತೀಚೆಗೆ ವರ್ಗಾವಣೆಯಾಗಿತ್ತು.

ಮಾನಸಿಕವಾಗಿ ನೊಂದಿರುದಾಗಿ ಸ್ನೇಹಿತರ ಬಳಿ ಪ್ರಶಾಂತ್ ಹೇಳಿಕೊಂಡಿದ್ದರೆನ್ನಲಾಗಿದ್ದು,ಕುಂದಾಪುರದ ಖಾಸಗಿ ಲಾಡ್ಜ್ ರೂಮ್ ಪಡೆದಿದ್ದರು.

ಲಾಡ್ಜ್ ಕೊಠಡಿಯಲ್ಲಿ ಮಲಗಿದ್ದ ರೀತಿಯಲ್ಲಿ ಪ್ರಶಾಂತ್ ಶವ ಪತ್ತೆಯಾಗಿದ್ದು,ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!