Wednesday, June 3, 2026
Homeಕರಾವಳಿಉಡುಪಿಮಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ಡಿಕ್ಕಿ ಹೊಡೆದು ಮಹಿಳೆ ಮೇಲೆಯೇ ಪಲ್ಟಿಯಾದ ಆಟೋ

ಮಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ಡಿಕ್ಕಿ ಹೊಡೆದು ಮಹಿಳೆ ಮೇಲೆಯೇ ಪಲ್ಟಿಯಾದ ಆಟೋ

- Advertisement -
- Advertisement -

ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಮಹಿಳೆಯ ಮೇಲೆಯೇ ಪಲ್ಟಿಯಾದ ಘಟನೆ ಮೂಲ್ಕಿ ತಾಲೂಕಿನ
ಕಿನ್ನಿಗೋಳಿಯಲ್ಲಿ ಸಂಭವಿಸಿದೆ.

ನಿನ್ನೆ ರಾತ್ರಿ ರಾಜರತ್ನಪುರ ನಿವಾಸಿ ಚೇತನ (35) ಎಂಬವರು ಕಿನ್ನಿಗೋಳಿಯ ರಾಮನಗರದ ಬಳಿ ಏಕಾಏಕಿ ರಸ್ತೆ ದಾಟಲು ಮುಂದಾಗಿದ್ದರು.ಈ ವೇಳೆ ವೇಗವಾಗಿ ಚಲಿಸುತ್ತಿದ್ದ ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಚೇತನ ಅವರ ಮೇಲೆಯೇ ಬಿದ್ದಿದೆ.

ಗಾಯಾಳು ಚೇತನ ಪುತ್ರಿಯನ್ನು ಟ್ಯೂಷನ್ ಸೆಂಟರ್ ನಿಂದ ವಾಪಸ್ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದ ವೇಳೆ ಅಪಘಾತ ಸಂಭವಿಸಿದ್ದು, ಸಮೀಪದಲ್ಲೇ ಇದ್ದ ಪುತ್ರಿ ಓಡಿ ಬಂದು ಆಟೋ ಮೇಲೆತ್ತಲು ಪ್ರಯತ್ನಿಸಿದ್ದು, ಬಳಿಕ ಸ್ಥಳೀಯರು ಸೇರಿ ರಕ್ಷಣೆ ಮಾಡಿದ್ದಾರೆ.

ಅಪಘಾತದಲ್ಲಿ ಆಟೋ ಚಾಲಕ, ಪ್ರಯಾಣಿಕ ಸೇರಿ ಸ್ಥಳದಲ್ಲಿ ನಿಂತಿದ್ದವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.

- Advertisement -

Latest News

error: Content is protected !!