Sunday, May 12, 2024
Homeತಾಜಾ ಸುದ್ದಿಗುಬ್ಬಿ ತಾಲೂಕಿನಲ್ಲಿ ಗೊಲ್ಲ ಸಮುದಾಯದಿಂದ ಮೈಲಿಗೆ ಆಚರಣೆ;ಊರಿನಿಂದ ಹೊರಗೆ ಗುಡಿಸಲಿನಲ್ಲಿ ಇರಿಸಿದ್ದ ಮಗುವನ್ನು ಎತ್ತಿಕೊಂಡು ಮನೆಗೆ...

ಗುಬ್ಬಿ ತಾಲೂಕಿನಲ್ಲಿ ಗೊಲ್ಲ ಸಮುದಾಯದಿಂದ ಮೈಲಿಗೆ ಆಚರಣೆ;ಊರಿನಿಂದ ಹೊರಗೆ ಗುಡಿಸಲಿನಲ್ಲಿ ಇರಿಸಿದ್ದ ಮಗುವನ್ನು ಎತ್ತಿಕೊಂಡು ಮನೆಗೆ ಕರೆತಂದ ನ್ಯಾಯಾಧೀಶೆ

spot_img
- Advertisement -
- Advertisement -

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಗೊಲ್ಲ ಸಮುದಾಯದ ಮೈಲಿಗೆ ಸಂಪ್ರದಾಯಕ್ಕೆ ಮಗು ಬಲಿಯಾದ ಕೆಲವೇ ದಿನಗಳಲ್ಲಿ ಮತ್ತೊಂದು ಮೈಲಿಗೆ ಸಂಪ್ರದಾಯ ಬಯಲಾಗಿದೆ.ವಿಷಯ ಗಮನಕ್ಕೆ ಬಂದ ಕೂಡಲೇ ನ್ಯಾಯಾಧೀಶೆ ಸ್ಥಳಕ್ಕೆ ಭೇಟಿ ನೀಡಿ ಮಗು ಮತ್ತು ಬಾಣಂತಿಯನ್ನು ಮನೆಗೆ ಕರೆ ತಂದು ಬಿಟ್ಟಿದ್ದಾರೆ.

ಗುಬ್ಬಿ ತಾಲೂಕಿನ ವರದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಕೆಲವು ದಿನಗಳಿಂದ ಮಗು ಮತ್ತು ಬಾಣಂತಿಯನ್ನು ಊರಿನಿಂದ ಹೊರಗೆ ಗುಡಿಸಲಿನಲ್ಲಿ ಇಡಲಾಗಿತ್ತು.

ಚಿಕ್ಕ ಗುಡಿಸಲಿನಲ್ಲಿ ಮಗು ಬಾಣಂತಿಯನ್ನ ಇರಿಸಲಾಗಿದ್ದ ಬಗ್ಗೆ ಮಾಹಿತಿ ಪಡೆದ ಗುಬ್ಬಿ ನ್ಯಾಯಾಲಯದ ನ್ಯಾಯಾಧೀಶೆ ಉಂಡಿ ಮಂಜುಳ ಶಿವಪ್ಪ ಗ್ರಾಮಕ್ಕೆ ಭೇಟಿ ನೀಡಿ ಮಗು ಮತ್ತು ಬಾಣಂತಿಯನ್ನು ರಕ್ಷಣೆ ಮಾಡಿದ್ದಾರೆ.

ಮಗುವನ್ನು ತಾವೇ ಕೈಗೆತ್ತಿಕೊಂಡು ಮನೆಗೆ ಕರೆ ತಂದ ನ್ಯಾಯಾಧೀಶರು,ಈ ಘಟನೆ ಮತ್ತೆ ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕುಟುಂಬಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

- Advertisement -
spot_img

Latest News

error: Content is protected !!