Wednesday, June 3, 2026
HomeUncategorizedವಾರ್ -2 ಸಿನಿಮಾದ ಶೂಟಿಂಗ್ ವೇಳೆ ಗಾಯ;ಜ್ಯೂನಿಯರ್ ಎನ್ ಟಿ ಆರ್ ಗೆ 2 ತಿಂಗಳು...

ವಾರ್ -2 ಸಿನಿಮಾದ ಶೂಟಿಂಗ್ ವೇಳೆ ಗಾಯ;ಜ್ಯೂನಿಯರ್ ಎನ್ ಟಿ ಆರ್ ಗೆ 2 ತಿಂಗಳು ಬೆಡ್ ರೆಸ್ಟ್

- Advertisement -
- Advertisement -

ಮುಂಬೈ :ವಾರ್ -2 ಸಿನಿಮಾದ ಶೂಟಿಂಗ್ ವೇಳೆ ಜ್ಯೂನಿಯರ್ ಎನ್ ಟಿ ಆರ್ ಗೆ ಗಾಯವಾಗಿದ್ದು 2 ತಿಂಗಳು ಬೆಡ್ ರೆಸ್ಟ್ ಗೆ ವೈದ್ಯರು ಸೂಚಿಸಿದ್ದಾರೆ.

ಜ್ಯೂನಿಯರ್ ಎನ್ ಟಿ ಆರ್ ಹಾಗೂ ಹೃತಿಕ್ ರೋಷನ್ ನಟನೆಯ ಬಹುನಿರೀಕ್ಷಿತ ಸಿನಿಮಾ ವಾರ್ 2. ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಮಧ್ಯೆ ಜ್ಯೂನಿಯರ್ ಎನ್ಟಿಆರ್ ಅವರು ಸೆಟ್ ನಲ್ಲಿ ಗಾಯಗೊಂಡಿದ್ದಾರೆ. ಅವರಿಗೆ ಎರಡು ತಿಂಗಳ ಬೆಡ್ ರೆಸ್ಟ್ ಗೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.

ಜೂನಿಯರ್ ಎನ್ಟಿಆರ್ ಅವರು ಆಕ್ಷನ್ ದೃಶ್ಯಕ್ಕಾಗಿ ತಯಾರಿ ನಡೆಸುತ್ತಿದ್ದಾಗ ಅವರ ಕೈಗಳಿಗೆ ಗಾಯವಾಗಿದೆ. ಹೀಗಾಗಿ ಎರಡು ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ.ಜೂನಿಯರ್ ಎನ್ಟಿಆರ್ ಅವರು ಅಕ್ಟೋಬರ್ನಲ್ಲಿ ಚೇತರಿಸಿಕೊಂಡ ನಂತರ ಅವರೊಂದಿಗಿನ ದೃಶ್ಯವನ್ನು ಈಗ ಚಿತ್ರೀಕರಿಸಲಾಗುತ್ತದೆ ಎನ್ನಲಾಗಿದೆ.

- Advertisement -

Latest News

error: Content is protected !!