Sunday, May 12, 2024
Homeಕರಾವಳಿಕರಾವಳಿ ಮೀನುಗಾರರಿಗೆ ಸಂಕಷ್ಟ ತಂದೊಡ್ಡಿದ ಅಂಬಲಿ ಮೀನು-ಇದು ಮತ್ಸ್ಯ ಸಂಕುಲದ ನಾಶಕ್ಕೆ ಮುನ್ಸೂಚನೆಯೇ?

ಕರಾವಳಿ ಮೀನುಗಾರರಿಗೆ ಸಂಕಷ್ಟ ತಂದೊಡ್ಡಿದ ಅಂಬಲಿ ಮೀನು-ಇದು ಮತ್ಸ್ಯ ಸಂಕುಲದ ನಾಶಕ್ಕೆ ಮುನ್ಸೂಚನೆಯೇ?

spot_img
- Advertisement -
- Advertisement -

ಮಂಗಳೂರು:ಹಲವು ಸಂಕಷ್ಟಗಳ ನಂತರ ಮೀನುಗಾರಿಕಾ ಕ್ಷೇತ್ರ ಮತ್ತೆ ಮೊದಲಿನಂತೆ ತನ್ನ ಚಟುವಟಿಕೆ ಆರಂಭಿಸಿದೆ. ಆದರೆ ಕರಾವಳಿ ಭಾಗದ ಬೋಟುಗಳಿಗೆ ಮತ್ತೂಂದು ಸಂಕಟ ಎದುರಾಗಿದೆ. ಸೆಪ್ಟಂಬರ್‌ನಿಂದ ನವೆಂಬರ್‌ವರೆಗೆ ಮೀನುಗಾರರ ಸೀಸನ್‌ ಆಗಿದ್ದು,ಸೀಸನ್‌ನಲ್ಲೇ ಮೀನುಗಾರರಿಗೆ ಸರಿಯಾದ ಪ್ರಮಾಣದಲ್ಲಿ ಮೀನು ದೊರಕುತ್ತಿಲ್ಲ.ಇತರ ಮೀನುಗಳ ಬದಲಾಗಿ ವಿಷಕಾರಿಯಾದ ಜೆಲ್ಲಿ ಮೀನು (ಅಂಬಲಿ ಮೀನು) ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದು, ಮೀನುಗಾರಿಕೆಗೆ ತೊಂದರೆಯಾಗಿದೆ.

ಈ ಮೊದಲು ಈ ಸಮಯದಲ್ಲಿ ಬಂಗುಡೆ, ಅಂಜಲ್‌, ಕೊಕ್ಕರ್‌, ಶಾಡಿ, ಬೂತಾಯಿ ಸೇರಿದಂತೆ ಹಲವು ಮೀನುಗಳು ಯಥೇಚ್ಛವಾಗಿ ದೊರಕುತ್ತಿದ್ದವು.ಆದರೆ ಕೆಲವು ದಿನಗಳಿಂದ ಮಲ್ಪೆ, ಗಂಗೊಳ್ಳಿ, ಮರವಂತೆ, ಶಿರೂರು ಮತ್ತಿತರ ಕಡೆಗಳಲ್ಲಿ ಮೀನುಗಾರಿಕೆಗೆ ತೆರಳಿದ ಬೋಟುಗಳಿಗೆ ಜೆಲ್ಲಿ ಮೀನು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದೆ.ಇದು ಮೀನುಗಾರನ್ನು ಸಂಕಷ್ಟಕ್ಕೆ ದೂಡಿದೆ. ಸೀಜನ್ ನಲ್ಲೆ ಹೀಗಾದರೆ ಮುಂದೇನು? ಎನ್ನುತ್ತಾರೆ ಮೀನುಗಾರರು.

ಕರಾವಳಿ ಮತ್ಸ್ಯ ಸಂಕುಲಕ್ಕೆ ಇದು ಮುಂದಾಗಲಿರುವ ಅಪಾಯದ ಮುನ್ಸೂಚನೆ.ಶಾಂತಸಾಗರದಲ್ಲಿ ಮಾತ್ರ ಕಂಡುಬರುತ್ತಿದ್ದ ಜೆಲ್ಲಿ ಮೀನಿನ ಹಾವಳಿ ಈಗ ಮಂಗಳೂರಿನಿಂದ ಆರಂಭವಾಗಿ ಕಾರವಾರದವರೆಗೆ ರಾಜ್ಯ ಕರಾವಳಿ ಯಲ್ಲೂ ಹೆಚ್ಚುತ್ತಿದೆ. ಇದರ ಹಾವಳಿ ಯಿಂದ ಹಲವು ರಾಷ್ಟ್ರಗಳಲ್ಲಿ ಬೇರೆ ಮೀನುಗಳ ಸಂತತಿ ನಾಶವಾಗಿ ಮೀನುಗಾರಿಕೆಯೇ ಸ್ಥಗಿತಗೊಳ್ಳುವ ಮಟ್ಟಕ್ಕೆ ಮುಟ್ಟಿದೆ. ಇದರಿಂದ ಕರಾವಳಿ ಮತ್ಸ್ಯ ಸಂಕುಲಕ್ಕೆಭಾರಿ ಕಂಟಕ ಕಾದಿದೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.

- Advertisement -
spot_img

Latest News

error: Content is protected !!