Thursday, June 4, 2026
Homeತಾಜಾ ಸುದ್ದಿಇಂದು ಫುಲ್ ಡೇ ಮುನಿರತ್ನ ಪರ ದರ್ಶನ್ ಪ್ರಚಾರ

ಇಂದು ಫುಲ್ ಡೇ ಮುನಿರತ್ನ ಪರ ದರ್ಶನ್ ಪ್ರಚಾರ

- Advertisement -
- Advertisement -

ಬೆಂಗಳೂರು: ದಿನೇ ದಿನೇ ರಾಜರಾಜೇಶ್ವರಿ ಉಪಚುನಾವಣೆಯ ಪ್ರಚಾರದ ಅಖಾಡ ರಂಗೇರುತ್ತಿದೆ. ಮೊನ್ನೆಯಷ್ಟೇ ಮುನಿರತ್ನ ಪರ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ ಪ್ರಚಾರವನ್ನು ನಡೆಸಿದ್ದರು. ಇಂದು ಚಾಲೆಂಜಿಂಗ್ ಸ್ಟಾರ್ ದರ್ಸನ್ ಅವರು ತಮ್ಮ ಸ್ನೇಹಿತನ ಪರ ಪ್ರಚಾರ ನಡೆಸಲಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಗೆ ಯಶವಂತಪುರ ರೈಲು ನಿಲ್ದಾಣದಿಂದ ದರ್ಶನ್‌ ರೋಡ್ ಶೋ ಆರಂಭವಾಗಲಿದ್ದು, ಮುನಿರತ್ನ ಪರ ಇಡೀ ದಿನ ರೋಡ್ ಶೋ‌ ನಡೆಸಿ ದರ್ಶನ್ ಮತಯಾಚಿಸಲಿದ್ದಾರೆ. ಆರಂಭದಲ್ಲಿ ಜೆಪಿ ಪಾರ್ಕ್, ಜಾಲಹಳ್ಳಿ, ಎಚ್ ಎಂಟಿ ವಾರ್ಡ್, ಪೀಣ್ಯಾ, ಗೊರಗುಂಟೆ ಪಾಳ್ಯಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಭೋಜನದ ಬಳಿಕ ಲಕ್ಷ್ಮಿದೇವಿನಗರ, ಲಗ್ಗೆರೆ, ಕೊಟ್ಟಿಗೆ ಪಾಳ್ಯ, ಜ್ಞಾನಭಾರತಿ ವಾರ್ಡ್ ಗಳಲ್ಲಿ ದರ್ಶನ್ ರೋಡ್ ಶೋ ಮಾಡಲಿದ್ದಾರೆ.

- Advertisement -

Latest News

error: Content is protected !!