Monday, June 29, 2026
Homeಕರಾವಳಿಉಡುಪಿಕರಾವಳಿ ಸಮಸ್ಯೆ ಬಗ್ಗೆ ವಿಧಾನ ಪರಿಷತ್ ನಲ್ಲಿ ಧ್ವನಿ ಎತ್ತಿದ ಎಂಎಲ್ಸಿ ಫಾರೂಕ್

ಕರಾವಳಿ ಸಮಸ್ಯೆ ಬಗ್ಗೆ ವಿಧಾನ ಪರಿಷತ್ ನಲ್ಲಿ ಧ್ವನಿ ಎತ್ತಿದ ಎಂಎಲ್ಸಿ ಫಾರೂಕ್

- Advertisement -
- Advertisement -

ಬೆಂಗಳೂರು: ಕರಾವಳಿಯ ಸುರಕ್ಷತೆ ಬಗ್ಗೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಿ.ಎಂ.‌ ಫಾರೂಕ್ ಸದನದಲ್ಲಿ ಧ್ವನಿ ಎತ್ತಿದ್ದಾರೆ.‌

ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಫಾರೂಕ್, ಕರಾವಳಿಯ ಮೂರು ಜಿಲ್ಲೆಗಳು ಸಮುದ್ರದ ಗಡಿಯನ್ನು ಹಂಚಿಕೊಳ್ಳುತ್ತವೆ, ಮಿಸೈಲ್ ಏನಾದ್ರೂ ಅಪ್ಪಳಿಸಿದರೆ ಬೆಂಕಿ ನಂದಿಸಲು ಸರಿಯಾದ ಫೈರ್ ಸೇಪ್ಟಿ ವ್ಯವಸ್ಥೆ ಇಲ್ಲ ಎಂದು ಪ್ರಸ್ತಾಪಿಸಿದ್ದಾರೆ.

ಅದೇ ರೀತಿ ಮಂಗಳೂರು ಏರ್ ಪೋರ್ಟ್ ನಲ್ಲೂ ಸರಿಯಾದ ವ್ಯವಸ್ಥೆ ಇಲ್ಲ, ಕರಾವಳಿಯಲ್ಲಿ ಡಾಟಾ ಸೆಂಟರ್ ಮಾಡಿ, ಕರಾವಳಿಯಲ್ಲಿರುವ ಪರಿಣಿತರ ಸೇವೆ ಪಡೆಯಿರಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಅಲ್ಲದೇ ಕಡಲ್ಕೊರತ ತಡೆಗೆ ಸಮುದ್ರಕ್ಕೆ ಕಲ್ಲು ಹಾಕಿ ಸಾವಿರಾರು ಕೋಟಿ ರೂಪಾಯಿ ಹಣ ವೇಸ್ಟ್ ಮಾಡುವ ಬದಲು ವಿದೇಶದಲ್ಲಿರುವ ನಡುಗಡ್ಡೆ ರೀತಿಯಲ್ಲಿ ಸಮುದ್ರ ತೀರದಲ್ಲಿ ವೈಜ್ಞಾನಿಕವಾಗಿಸಮುದ್ರ ತೀರದುದ್ದಕ್ಕೂ ಗಾರ್ಡನ್ ಮಾಡಿ ಕೊರೆತ ತಡೆಯುವ ತಂತ್ರಜ್ಞಾನ ತಂದು ಇಲ್ಲೂ ಅಳವಡಿಸಿ ಎಂದು ಫಾರೂಕ್ ಒತ್ತಾಯಿಸಿದ್ದಾರೆ

ಇದೇ ವೇಳೆ ಕರಾವಳಿಯಲ್ಲಿ ಸಾಕಷ್ಟು ಪುಣ್ಯ ಕ್ಷೇತ್ರಗಳಿದ್ದು ಅವುಗಳನ್ನು ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿ ಎಂದು ಬಿ.ಎಂ. ಫಾರೂಕ್ ರಾಜ್ಯ ಸರ್ಕಾರವನ್ನು ವಿಧಾನ ಪರಿಷತ್ ನಲ್ಲಿ ಒತ್ತಾಯ ಮಾಡಿದ್ದಾರೆ.

- Advertisement -

Latest News

error: Content is protected !!