Saturday, June 6, 2026
Homeತಾಜಾ ಸುದ್ದಿಬೀದರ್: ಬಾವಿಯಲ್ಲಿ ಅಪ್ರಾಪ್ತ ಸಹೋದರಿಯರಿಬ್ಬರ ಮೃತದೇಹ ಪತ್ತೆ !

ಬೀದರ್: ಬಾವಿಯಲ್ಲಿ ಅಪ್ರಾಪ್ತ ಸಹೋದರಿಯರಿಬ್ಬರ ಮೃತದೇಹ ಪತ್ತೆ !

- Advertisement -
- Advertisement -

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕು ಅಟ್ಟರ್ಗಾ ಗ್ರಾಮದಲ್ಲಿ ಅಪ್ರಾಪ್ತ ಸಹೋದರಿಯರಿಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.

ಮೃತ ದುರ್ದೈವಿ ಸಹೋದರಿಯರು ಅಂಕಿತಾ(15) ಹಾಗೂ ಶ್ರದ್ಧಾ(13) .ಇವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೊದಲಿಗೆ ಶಂಕೆ ವ್ಯಕ್ತವಾಗಿತ್ತು. ನಂತರ ಇವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಮೃತ ಸಹೋದರಿಯರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ ಹಾಗೇ ಮಕ್ಕಳ ಶವ ಸಂಸ್ಕಾರ ಮಾಡುವುದಿಲ್ಲ, ನಮಗೆ ನ್ಯಾಯ ಒದಗಿಸಬೇಕು ಎಂದು ಕುಟುಂಬದವರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಮೇಹಕರ್ ಪೊಲೀಸರು ಭೇಟಿ ನೀಡಿ ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!