Saturday, June 6, 2026
Homeತಾಜಾ ಸುದ್ದಿಜಯಲಲಿತಾ ಸಾವು ಪ್ರಕರಣ: ಆಪ್ತೆ ಶಶಿಕಲಾರೇ ಜಯಾ ಸಾವಿಗೆ ಕಾರಣ: ತನಿಖೆಗೆ ಆರ್ಮುಗಸ್ವಾಮಿ ಆಯೋಗ ಆದೇಶ

ಜಯಲಲಿತಾ ಸಾವು ಪ್ರಕರಣ: ಆಪ್ತೆ ಶಶಿಕಲಾರೇ ಜಯಾ ಸಾವಿಗೆ ಕಾರಣ: ತನಿಖೆಗೆ ಆರ್ಮುಗಸ್ವಾಮಿ ಆಯೋಗ ಆದೇಶ

- Advertisement -
- Advertisement -

ತಮಿಳುನಾಡು ಮಾಜಿ ಸಿಎಂ ಜೆ. ಜಯಲಲಿತಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾ. ಆರ್ಮುಗಸ್ವಾಮಿ ವಿಚಾರಣಾ ಸಮಿತಿ ವರದಿ ಮಂಡನೆ ಮಾಡಿದೆ. ಜಯಲಲಿತಾ ಸಾವಿಗೆ ಅವರ ಆಪ್ತೆ ವಿ.ಕೆ ಶಶಿಕಲಾ ಕಾರಣ ಎಂದು ನ್ಯಾ. ಆರುಮುಗಸ್ವಾಮಿ ಆಯೋಗ ಹೇಳಿದೆ.

ಜೆ. ಜಯಲಲಿತಾ ಅವರ ಸಾವಿನ ಕುರಿತಾದ ತನ್ನ 608 ಪುಟಗಳ ವರದಿಯನ್ನು ನ್ಯಾ. ಆರುಮುಗಸ್ವಾಮಿ ಆಯೋಗ ಸಲ್ಲಿಸಿದ ವರದಿ ಇಂದು ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಸಮಿತಿಯ ಪರಿಶೀಲನೆಯ ಪ್ರಕಾರ ಜಯಲಲಿತಾ ಸಾವು ಪ್ರಕರಣದಲ್ಲಿ ಅವರ ಆಪ್ತ ಸಹಾಯಕಿ ವಿ.ಕೆ.ಶಶಿಕಲಾ, ಡಾ ಶಿವಕುಮಾರ್ (ಜಯಲಲಿತಾ ಅವರ ಆಪ್ತ ವೈದ್ಯ ಮತ್ತು ಶಶಿಕಲಾ ಅವರ ಸಂಬಂಧಿ), ಮಾಜಿ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಮತ್ತು ಮಾಜಿ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಅವರನ್ನು ತಪ್ಪಿತಸ್ಥರೆಂದು ಗುರುತಿಸಿದ್ದು, ಅವರ ವಿರುದ್ಧ ತನಿಖೆ ನಡೆಸಬೇಕೆಂದು ಹೇಳಿದೆ.

- Advertisement -

Latest News

error: Content is protected !!