Thursday, April 25, 2024
Homeಮನರಂಜನೆವಿಚಿತ್ರವಾಗಿ ಡ್ರೆಸ್ ಮಾಡಿಕೊಂಡು ಅತ್ತೆ ಮನೆಗೆ ಹೊರಟು ವಿವಾದಕ್ಕೆ ಕಾರಣವಾದ ಬಿಗ್ಬಾಸ್ ಸ್ಪರ್ಧಿ

ವಿಚಿತ್ರವಾಗಿ ಡ್ರೆಸ್ ಮಾಡಿಕೊಂಡು ಅತ್ತೆ ಮನೆಗೆ ಹೊರಟು ವಿವಾದಕ್ಕೆ ಕಾರಣವಾದ ಬಿಗ್ಬಾಸ್ ಸ್ಪರ್ಧಿ

spot_img
- Advertisement -
- Advertisement -

ಮುಂಬೈ : ನಟಿ, ಗಾಯಕಿ ಜಸ್ಲೀನ್ ಮಾಥಾರೂ ಇದೀಗ ಸಾಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದಕ್ಕೆ ಕಾರಣ ಅವರು ಧರಿಸಿದ ಡ್ರೆಸ್.

ಯೆಸ್… ಜಸ್ಲೀನ್ ಮಾಥಾರೂ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದೆ. ವಧು ರೀತಿಯಲ್ಲಿ ಡ್ರೆಸ್ ಮಾಡಿಕೊಂಡ ನಟಿ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟು ಪೋಸ್ ನೀಡಿರುವ ವೀಡಿಯೋವನ್ನ ಜಸ್ಲೀನ್ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಧುವಿನಂತೆ ರೆಡ್ ದುಪ್ಪಟಾ, ರೆಡ್ ಟಾಪ್, ಬಿಂದಿ, ಆಭರಣ ಧರಿಸಿರುವ ಜಸ್ಲೀನ್, ಲೆಹೆಂಗಾ ಬದಲು ತಿಳಿ ನೀಲಿ ಬಣ್ಣದ ಶಾರ್ಟ್ಸ್ ಧರಿಸಿ ಅತ್ತೆಯ ಮನೆಗೆ ಹೊರಟಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದೀಗ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪ್ರಚಾರಕ್ಕಾಗಿ ಭಾರತೀಯ ಸಂಸ್ಕ್ರತಿಗೆ ಧಕ್ಕೆಯುಂಟು ಮಾಡಿದ್ದೀರಿ. ಹಾಗಾಗಿ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕೆಂದು ಕೆಲ ನೆಟ್ಟಿಗರು ಆಗ್ರಹಿಸಿದ್ದಾರೆ. ಇನ್ನು ಹಲವರು ನಟಿಯ ವೀಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ.

- Advertisement -
spot_img

Latest News

error: Content is protected !!