Sunday, May 5, 2024
Homeತಾಜಾ ಸುದ್ದಿಚಿರತೆ ದಾಳಿಗೆ ನಲುಗಿ ಹೋದ ಗ್ರಾಮಗಳು!..ಪರಿಹಾರ ತೋರದೆ ಚಿರತೆಯೊಂದಿಗೆ ಸಹಬಾಳ್ವೆ ಮಾಡುವ ಅನಿವಾರ್ಯತೆ

ಚಿರತೆ ದಾಳಿಗೆ ನಲುಗಿ ಹೋದ ಗ್ರಾಮಗಳು!..ಪರಿಹಾರ ತೋರದೆ ಚಿರತೆಯೊಂದಿಗೆ ಸಹಬಾಳ್ವೆ ಮಾಡುವ ಅನಿವಾರ್ಯತೆ

spot_img
- Advertisement -
- Advertisement -

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಪದೇಪದೇ ಚಿರತೆ ದಾಳಿ ಸುದ್ದಿ ಕೇಳಿಬರುತ್ತಲೇಇದೆ. . ಹೊಲಕ್ಕೆ ಹೋದವರು ವಾಪಸ್‌ ಮನೆಗೆ ಬರುವ ವರೆಗೆ ಜೀವ ಕೈಲಿಹಿಡಿದು ಕೂರಬೇಕಾದ ವಾತಾವರಣವಿದ್ದು ಕಳೆದ ಒಂದು ವರ್ಷದ ಅವಧಿಯಲ್ಲಿ 5 ಜನರನ್ನು ಚಿರತೆ ಕೊಂಡು ಹಾಕಿದೆ.


ಹೆಬ್ಬೂರು-ಕುಣಿಗಲ್‌-ಗುಬ್ಬಿ ತಾಲ್ಲೂಕು ಸೇರುವ ಮಣಿಕುಪ್ಪೆ, ಚನ್ನಯ್ಯನಪಾಳ್ಯ, ಕುರಿಬೋರನಪಾಳ್ಯ ಸೇರಿ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಚಿರತೆ ದಾಂಧಲೆ ಹೆಚ್ಚಾಗಿದ್ದು ಅಧಿಕಾರಿಗಳು ಮನುಷ್ಯನನ್ನೇ ತಿಂದುಹಾಕುವ ಈ ಕ್ರೂರ ವ್ಯಾಘ್ರನ ಪತ್ತೆಗೆಬಲೆ ಬಿಸಿದ್ದಾರೆ.ಆದರೆ ಪ್ರದೇಶದಲ್ಲಿ ಹಲವು ಚಿರತೆಗಳಿದ್ದು ಪತ್ತೆ ಕಾರ್ಯ ವಿಫಲವಾಗಿದೆ. ಇದೀಗ ಚಿರತೆಯೊಂದಿಗೆ ಸಹಬಾಳ್ವೆ ಮಾಡುವ ಅನಿವಾರ್ಯತೆ ಈ ಭಾಗದ ಜನರಿಗೆ ಬಂದೊದಗಿದೆ.

ಚಿರತೆ ಹಾವಳಿ ಪ್ರದೇಶದಲ್ಲಿ ಹೆಜ್ಜೆ ಹೆಜ್ಜೆಗೂ ಬೋನ್ ಇಟ್ಟರು ಚಿರತೆ ಬೋನಿಗೆ ಬಿದ್ದಿಲ್ಲ.ಹಲವು ಪ್ರಯತ್ನ ನಡೆಸಿದ ಅಧಿಕಾರಿಗಳು ಇದೀಗ ವಿಧಿಯಿಲ್ಲದೆ ಜನರಿಗೆ ಚಿರತೆಯೊಂದಿಗೆ ಸಹಬಾಳ್ವೆ ಮಾಡುವುದು ಹೇಗೆ ಎಂಬುದನ್ನು ತರಬೇತಿ ನೀಡುತ್ತಿದ್ದಾರೆ.ಈ ವಿಷಯಕ್ಕೆ ಶಾಶ್ವತ ಪರಿಹಾರದ ಅವಶ್ಯಕತೆ ಬಹಳಷ್ಟಿದ್ದು ಜನ ಸರ್ಕಾರದ ನೆರವಿಗೆ ಎದುರು ನೋಡುತ್ತಿದ್ದಾರೆ.

- Advertisement -
spot_img

Latest News

error: Content is protected !!