Sunday, June 7, 2026
Homeಕರಾವಳಿಕಡೇಶಿವಾಲಯ ರೋಟರಿ ಸಮುದಾಯ ದಳದಿಂದ 'ಜನ ಸಂಪರ್ಕ ಸಭೆ'

ಕಡೇಶಿವಾಲಯ ರೋಟರಿ ಸಮುದಾಯ ದಳದಿಂದ ‘ಜನ ಸಂಪರ್ಕ ಸಭೆ’

- Advertisement -
- Advertisement -

ಬಂಟ್ವಾಳ: ಭ್ರಷ್ಟಾಚಾರ ನಿಗ್ರಹ ದಳ ಸಹಬಾಗಿತ್ವದಲ್ಲಿ ರೋಟರಿ ಸಮುದಾಯ ದಳ ಕಡೇಶಿವಾಲಯ ಇದರ ಸಹಕಾರದೊಂದಿಗೆ “ಜನ ಸಂಪರ್ಕ ಸಭೆ” ಯು ಇಂದು ಮಧ್ಯಾಹ್ನ ನಡೆಯಿತು.

ರೋಟರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಎಸಿಬಿ ಡಿವ್ಯೆಎಸ್ಪಿ ಪೊಲೀಸ್ ಉಪಾಧ್ಯಕ್ಷ ಕೆಸಿ ಪ್ರಕಾಶ್ ಮತ್ತು ಪೋಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಮತ್ತು ಗುರುರಾಜ್ ಉಪಸ್ಥಿತಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಥಳೀಯರು ಭ್ರಷ್ಟಾಚಾರ ನಿಗ್ರಹ ದಳದ ಬಗ್ಗೆ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡರು.

ರೋಟರಿ ಸಮುದಾಯ ದಳದ ಸತೀಶ್ಚಂದ್ರ ಶೆಟ್ಟಿ ಮತ್ತು ಅಧ್ಯಕ್ಷರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ದಳದ ಕೆಕೆ ಶೆಟ್ಟಿ ಕುರುಂಬ್ಲಾಜೆ ಸ್ವಾಗತಿಸಿ, ಸೋಮಸುಂದರ್ ವಂದನಾರ್ಪಣೆಗೈದು
ಧನುಷ್ ಪೆರ್ಲಾಪು ನಿರೂಪಿಸಿದರು.

- Advertisement -

Latest News

error: Content is protected !!