Thursday, June 25, 2026
Homeಕರಾವಳಿಮಂಗಳೂರುಬಂಟ್ವಾಳ: ಡಿ.ವೈ.ಎಸ್.ಪಿ.ಕಚೇರಿಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ  ಜಗನ್ನಾಥ ಶೆಟ್ಟಿ ಅವರು ASI ಆಗಿ ಭಡ್ತಿ

ಬಂಟ್ವಾಳ: ಡಿ.ವೈ.ಎಸ್.ಪಿ.ಕಚೇರಿಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ  ಜಗನ್ನಾಥ ಶೆಟ್ಟಿ ಅವರು ASI ಆಗಿ ಭಡ್ತಿ

- Advertisement -
- Advertisement -

ಬಂಟ್ವಾಳ: ಡಿ.ವೈ.ಎಸ್.ಪಿ.ಕಚೇರಿಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ  ಜಗನ್ನಾಥ ಶೆಟ್ಟಿ ಅವರು ASI ಆಗಿ ಭಡ್ತಿಯಾಗಿದ್ದಾರೆ. ಅಲ್ಲದೇ ಗ್ರಾಮಾಂತರ ಪೋಲೀಸ್‌ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

1997 ರಲ್ಲಿ ಪೋಲೀಸ್ ಇಲಾಖೆಗೆ ಸೇರಿದ ಜಗನ್ನಾಥ ಶೆಟ್ಟಿ ಅವರು ಜಿಲ್ಲೆಯ ವಿವಿಧ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.1998 ರಲ್ಲಿ ಬಂಟ್ವಾಳ ಪೋಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾದ ಬಳಿಕ ಮಂಗಳೂರು ರೌಡಿ ನಿಗ್ರಹ ದಳದಲ್ಲಿ ಸೇವೆ, ಬಂಟ್ವಾಳ ವೃತ್ತ ನಿರೀಕ್ಷಕರ ಕಚೇರಿ, ಉಪ್ಪಿನಂಗಡಿ ಪೋಲೀಸ್ ಠಾಣೆ, ಬಂಟ್ವಾಳ ಗ್ರಾಮಾಂತರ, ಪುಂಜಾಲಕಟ್ಟೆ, ಮಂಗಳೂರು ಹೆಚ್ಚುವರಿ ಪೋಲೀಸ್ ಅಧೀಕ್ಷಕರ ಕಚೇರಿ, ISD ಬಂಟ್ವಾಳ ಹೀಗೆ ಇಷ್ಟು ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಹೆಚ್.ಸಿ.ಯಾಗಿ ಮುಂಬಡ್ತಿಹೊಂದಿದ ಇವರು ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣೆಗೆ ವರ್ಗಾವಣೆಯಾದರು, ಬಳಿಕ ಅರಣ್ಯಸಂಚಾರಿ ಇಲಾಖೆ ಮಂಗಳೂರು, ಎಸ್. ಪಿ.ಕಚೇರಿಯ ವಿಶೇಷ ವಿಭಾಗ,ಬಂಟ್ವಾಳ ನಗರ ಪೋಲೀಸ್ ಠಾಣೆ, ಇದೀಗ ಡಿ.ವೈಎಸ್.ಪಿ.ಕಚೇರಿಯಿಂದ ASI ಯಾಗಿ ಮುಂಬಡ್ತಿಯಾಗಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.

- Advertisement -

Latest News

error: Content is protected !!