Sunday, June 7, 2026
Homeಕರಾವಳಿಜ. 11 ಮತ್ತು 12ರಂದು ಬಹುನಿರೀಕ್ಷಿತ ಕರಾವಳಿ ಬೀಚ್‌ ಉತ್ಸವ

ಜ. 11 ಮತ್ತು 12ರಂದು ಬಹುನಿರೀಕ್ಷಿತ ಕರಾವಳಿ ಬೀಚ್‌ ಉತ್ಸವ

- Advertisement -
- Advertisement -

ಮಂಗಳೂರು: ಬಹುನಿರೀಕ್ಷಿತ ಕರಾವಳಿ ಬೀಚ್‌ ಉತ್ಸವವು ರೋಹನ್‌ ಕಾರ್ಪೊರೇಷನ್‌ ಸಹಯೋಗ ದೊಂದಿಗೆ ಜ. 11 ಮತ್ತು 12ರಂದು ಪಣಂಬೂರು ಸಮೀಪದ ತಣ್ಣೀರುಬಾವಿ ಬೀಚ್‌ನಲ್ಲಿ ನಡೆಯಲಿದೆ.

ಬೀಚ್ ಉತ್ಸವದಲ್ಲಿ ಎರಡು ದಿನಗಳ ಕಾಲ ಆಕರ್ಷಕ ಸಂಗೀತ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳು ನಡೆಯಲಿದ್ದು, ಜ. 11ರಂದು ಸಂಜೆ 6 ಗಂಟೆಗೆ ನೃತ್ಯೋತ್ಸವ, 7.30ಕ್ಕೆ ಕದ್ರಿ ಮಣಿಕಾಂತ್‌ ಲೈವ್‌ ನಡೆಯಲಿದೆ. ಜ. 12ರಂದು ಬೆಳಗ್ಗೆ 5.30ಕ್ಕೆ ಯೋಗ, 6.30ಕ್ಕೆ ಉದಯರಾಗ, 9ಕ್ಕೆ ಜಲ ಕ್ರೀಡೆ, 9:30ಕ್ಕೆ ಮರಳು ಶಿಲ್ಪ ಸ್ಪರ್ಧೆ, 5.30ಕ್ಕೆ ನೃತ್ಯೋತ್ಸವ, 6.30ಕ್ಕೆ ಸಮಾರೋಪ ಸಮಾರಂಭ, 7.30ರಿಂದ ರಘು ದೀಕ್ಷಿತ್‌ ಪ್ರಾಜೆಕ್ಟ್ ಲೈವ್‌ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!