Wednesday, June 24, 2026
Homeತಾಜಾ ಸುದ್ದಿಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಶಾ ಕಾರ್ಯಕರ್ತೆಯರಿಂದ ಅನಿರ್ದಿಷ್ಟಾವಧಿ ಹೋರಾಟ..!  

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಶಾ ಕಾರ್ಯಕರ್ತೆಯರಿಂದ ಅನಿರ್ದಿಷ್ಟಾವಧಿ ಹೋರಾಟ..!  

- Advertisement -
- Advertisement -

ಬೆಂಗಳೂರು: ಇಂದಿನಿಂದ(ಜ.07) ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ  ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟವನ್ನು ಆರಂಭಿಸಿದ್ದು, ಅವುಗಳಲ್ಲಿ ಸಂಬಳ ಹೆಚ್ಚಳ ಕೂಡ ಒಂದಾಗಿದೆ.

ಆಶಾ ಕಾರ್ಯಕರ್ತೆಯರಿಗೆ ಸ್ವಯಂ ಸೇವಕರ ಸ್ಥಾನಮಾನ ಮಾತ್ರ ನೀಡಲಾಗಿದ್ದು, ಲಸಿಕೆ ವಿತರಣೆ, ಮಗು ಮತ್ತು ತಾಯಂದಿರ ಆರೈಕೆ, ನೈರ್ಮಲ್ಯ, ರೋಗ ನಿಯಂತ್ರಣ ಸೇರಿದಂತೆ ಸರ್ಕಾರದ ಹಲವಾರು ಅಭಿಯಾನದ ಅನುಷ್ಠಾನಗಳಲ್ಲಿ ಮಹತ್ವದ ಪಾತ್ರಗಳನ್ನು ವಹಿಸಿದ್ದಾರೆ.

ಇವರ ಹೋರಾಟದ ಬೇಡಿಕೆಗಳಾಗಿ ಸಂಬಳ ಹೆಚ್ಚಳ, ತಮ್ಮ ಕೆಲಸಕ್ಕೆ ಸೂಕ್ತ ಮಾನ್ಯತೆ ಸಿಗುವಂತೆ ಆಗ್ರಹಿಸಿ ರಾಜ್ಯಾದ್ಯಂತ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. 

- Advertisement -

Latest News

error: Content is protected !!