- Advertisement -
- Advertisement -
ಸುಳ್ಯ: ಐವರ್ನಾಡಿನ ಒಂದು ಮನೆಯವರು ಕಾಸರಗೋಡಿನ ತನ್ನ ಸಂಬಂಧಿಕರ ಮನೆಗೆ ಹೋಗಿ ಅಲ್ಲಿ ಲಾಕ್ ಡೌನ್ ನಿಂದ ಬಾಕಿಯಾಗಿದ್ದು ಅವರು ಇತ್ತೀಚೆಗೆ ಮರಳಿ ಐವರ್ನಾಡಿನ ಮನೆಗೆ ಬಂದ ಕಾರಣ ಅವರಿಗೆ ಹೋಂ ಕ್ವಾರಂಟೈನ್ ಗೆ ಸೂಚಿಸಲಾಗಿದೆ.
ಸುಮಾರು ಒಂದು ತಿಂಗಳ ಮೊದಲು ಐವರ್ನಾಡಿನ ಕೈವಲ್ತಡ್ಕದಲ್ಲಿ ಒಂದು ಮನೆಯವರು ತನ್ನ ಸಂಬಂಧಿಕರ ಮನೆ ಕಾಸರಗೋಡಿಗೆ ಹೋಗಿದ್ದರು.
ನಂತರ ಕೊರೊನಾ ವೈರಸ್ ತಡೆಗಟ್ಟಲು ಸರಕಾರ ಲಾಕ್ ಡೌನ್ ಜಾರಿಗೆ ತಂದಿರುವುದರಿಂದ ಅವರು ಊರಿಗೆ ಬರಲಾಗದೆ ಅಲ್ಲಿಯೆ ಬಾಕಿಯಾಗಿದ್ದರು.
ಇತ್ತೀಚೆಗೆ ಅವರು ಊರಿಗೆ ಬಂದಿದ್ದರು. ಈ ವಿಷಯ ತಿಳಿದ ಆಶಾಕಾರ್ಯಕರ್ತೆಯರು,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯವರು ಅವರ ಮನೆಗೆ ತೆರಳಿ ಅವರನ್ನು ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿರುವುದಾಗಿ ತಿಳಿದು ಬಂದಿದೆ.
- Advertisement -