ಸುಳ್ಯಎ. 26: ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ದಿನಸಿ ಹಾಗೂ ಗೃಹೋಪಯೋಗಿ ವಸ್ತುಗಳ ಮಳಿಗೆ ಸಮೃದ್ಧಿ ಸೂಪರ್ ಮಾರ್ಕೆಟ್ ಇಂದು ಅರಂತೋಡಿನ ಸಹಕಾರಿ ಸದನದಲ್ಲಿ ಶುಭಾರಂಭಗೊಂಡಿತು.
ಲಾಕ್ ಡೌನ್ ಹಿನ್ನಲೆಯಿಂದ ದಿನ ನಿತ್ಯದ ಸಾಮಗ್ರಿ ದೊರೆಯದೆ ಜನರು ಸಮಸ್ಯೆ ಎದುರಿಸುತಿತ್ತದ್ದರು ಇದನ್ನು ಅರಿತ ಸಹಕಾರಿ ಬ್ಯಾಂಕ್ ಪ್ರಾವಿಜನ್ ಸ್ಟೋರ್ ತೆರೆದಿದೆ.

ಜಿ. ಪಂ. ಸದಸ್ಯ ಹರೀಶ್ ಕಂಜಿಪಿಲಿ ಅವರು ರಿಬ್ಬನ್ ಕಟ್ ಮಾಡುವ ಮೂಲಕ ಹಾಗೂ ಹಿರಿಯ ಕೃಷಿಕರಾದ ವಸಂತ ಭಟ್ ತೊಡಿಕಾನ ಅವರು ದೀಪ ಬೆಳಗಿಸುವ ಮೂಲಕ ಸಮೃದ್ಧಿ ಮಳಿಗೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ತಾ.ಪಂ. ಸದಸ್ಯೆ ಶ್ರೀಮತಿ ಪುಷ್ಪಾ ಮೇದಪ್ಪ, ಎ.ಪಿ.ಎಂ.ಸಿ. ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಜತ್ತಪ್ಪ ಮಾಸ್ತರ್ ಅಳಿಕೆ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಿ.ಬಿ. ದಿವಾಕರ ರೈ, ಅರಂತೋಡು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕೊಡೆಂಕಿರಿ, ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಕೆ.ಆರ್. ಪದ್ಮನಾಭ, ಶ್ರೀಮತಿ ಪ್ರೇಮಾ ವಸಂತ ಭಟ್ ತೊಡಿಕಾನ, ಅರಂತೋಡು ಹಾ.ಉ.ಸ.ಸಂಘದ ಅಧ್ಯಕ್ಷ ಯು.ಯಂ. ಶೇಷಗಿರಿ, ಹಾ.ಉ.ಸ.ಸಂಘದ ಉಪಾಧ್ಯಕ್ಷೆ ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು ಸೇರಿದಂತೆ ಸಹಕಾರಿ ಸಂಘದ ಎಲ್ಲಾ ನಿರ್ದೇಶಕರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಮೃದ್ಧಿ ಮಳಿಗೆಯ ಪ್ರಥಮ ಗ್ರಾಹಕರಾದ, ಜ್ಯೋತಿಷಿ ಶಶಿಧರ ಅವರಿಗೆ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಹಾಗೂ ಉಪಾಧ್ಯಕ್ಷ ದಯಾನಂದ ಕುರುಂಜಿ ಅವರು ಜಂಟಿಯಾಗಿ ಸಾಮಾಗ್ರಿಗಳನ್ನು ಹಸ್ತಾಂತರಿಸಿದರು.
