Friday, June 5, 2026
Homeಕರಾವಳಿಬೆಳ್ತಂಗಡಿ : ಆಭರಣ ಜ್ಯುವೆಲ್ಲರಿ ಶಾಪ್ ಮೇಲೆ ಐಟಿ ದಾಳಿ ಪ್ರಕರಣ; ಅಧಿಕಾರಿಗಳಿಂದ ಶೋಧ ಕಾರ್ಯ...

ಬೆಳ್ತಂಗಡಿ : ಆಭರಣ ಜ್ಯುವೆಲ್ಲರಿ ಶಾಪ್ ಮೇಲೆ ಐಟಿ ದಾಳಿ ಪ್ರಕರಣ; ಅಧಿಕಾರಿಗಳಿಂದ ಶೋಧ ಕಾರ್ಯ ಮುಕ್ತಾಯ

- Advertisement -
- Advertisement -

ಬೆಳ್ತಂಗಡಿ : ಕರ್ನಾಟಕದಲ್ಲಿರುವ ಎಲ್ಲಾ ಆಭರಣ ಚಿನ್ನಾಭರಣ ಮಳಿಗೆಗಳ ಮೇಲೆ ಅ.31 ರಿಂದ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆಯಲ್ಲಿ ತೊಡಗಿದ್ದರು. ಬೆಳ್ತಂಗಡಿಯ ಆಭರಣ ಜ್ಯುವೆಲರಿ ಶಾಪ್ ನಲ್ಲಿ ಸತತ ನಾಲ್ಕು ದಿನಗಳ ಕಾರ್ಯಾಚರಣೆ ನಡೆಸಿ ನ.4 ಬೆಳಗ್ಗಿನ ಜಾವ 2:30 ಕ್ಕೆ ಬೆಂಗಳೂರು ಐಟಿ ಕಚೇರಿಗೆ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.

ಬೆಳ್ತಂಗಡಿಯ  ಸಂತೆಕಟ್ಟೆಯಲ್ಲಿರುವ ಭರಣಿ ಕಟ್ಟದಲ್ಲಿರುವ ಆಭರಣ ಚಿನ್ನದ ಮಳಿಗೆ ಮೇಲೆ ಎರಡು ಇನೋವಾ ಕಾರಿನಲ್ಲಿ ಬೆಂಗಳೂರು ಐಟಿ ಕಚೇರಿಯಿಂದ ಬಂದ ಚೆನ್ನೈ , ಆಂದ್ರಪ್ರದೇಶ, ತಮಿಳುನಾಡು, ಕೊಚ್ಚಿ ಸೇರಿದಂತೆ ಒಂಭತ್ತು ಜನ ಅಧಿಕಾರಿಗಳು ಅ.31 ರಂದು ಬೆಳಗ್ಗೆ 6 ಗಂಟೆಯಿಂದ ನ.3 ರ ರಾತ್ರಿವರೆಗೆ ಒಟ್ಟು ನಾಲ್ಕು ದಿನ ದಾಳಿ ಮಾಡಿ ಚಿನ್ನಾಭರಣ ಹಾಗೂ ದಾಖಲೆ ಪರಿಶೀಲನೆ ನಡೆಸಿದ್ದರು. ಐಟಿ ದಾಳಿ ಹಿನ್ನೆಲೆ ನಾಲ್ಕು ದಿನಗಳಿಂದ ಗ್ರಾಹಕರಿಗೆ ಪ್ರವೇಶ ನಿಷೇಧಿಸಲಾಗಿತ್ತು.

ಉಡುಪಿಯ ಆಭರಣ ಶಾಪ್ ಗಳಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ರಮವಾಗಿ ಶೇಖರಿಸಿಟ್ಟ ಚಿನ್ನದ ಗಟ್ಟಿ ಐಟಿ ಅಧಿಕಾರಿಗಳಿಗೆ ದೊರೆತಿದ್ದು ಅಲ್ಲಿಯ ದಾಳಿ ಐದನೇ ದಿನಕ್ಕೆ ಮುಂದುವರಿದಿದೆ ಎಂದು ಐಟಿ ಮೂಲಗಳು ಮಹಾ ಎಕ್ಸ್ ಪ್ರೆಸ್ ಗೆ ತಿಳಿಸಿವೆ‌.

- Advertisement -

Latest News

error: Content is protected !!