Sunday, June 7, 2026
HomeWorldಏ.2ರಂದು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಭಾರತಕ್ಕೆ ಭೇಟಿ

ಏ.2ರಂದು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಭಾರತಕ್ಕೆ ಭೇಟಿ

- Advertisement -
- Advertisement -

ನವದೆಹಲಿ: ಭಾರತ ಮತ್ತು ಇಸ್ರೇಲ್‌ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 30 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಏಪ್ರಿಲ್ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡುವುದಾಗಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ತಿಳಿಸಿದ್ದಾರೆ.

“ನನ್ನ ಸ್ನೇಹಿತ, ಪ್ರಧಾನಿ ಮೋದಿಯವರ ಆಹ್ವಾನದ ಮೇರೆಗೆ ಭಾರತಕ್ಕೆ ನನ್ನ ಮೊದಲ ಅಧಿಕೃತ ಭೇಟಿ ನೀಡಲು ನಾನು ಸಂತೋಷಪಡುತ್ತೇನೆ ಮತ್ತು ನಮ್ಮ ದೇಶಗಳ ಸಂಬಂಧಗಳಿಗೆ ನಾವು ಒಟ್ಟಾಗಿ ಮುನ್ನಡೆಯುತ್ತೇವೆ” ಎಂದು ಭೇಟಿಯ ಕುರಿತಾಗಿ ನಫ್ತಾಲಿ ಬೆನೆಟ್ ಹೇಳಿದ್ದಾರೆ. ಭಾರತ ಮತ್ತು ಇಸ್ರೇಲ್‌ ನಡುವಿನ ರಾಜತಾಂತ್ರಿಕ ಬಾಂಧವ್ಯ ಸ್ಥಾಪನೆಯಾಗಿ ಮೂವತ್ತು ವರ್ಷಗಳಾಗಿದ್ದು ಅದರ ಸಂಸ್ಮರಣಾ ಕಾರ್ಯಕ್ರಮ ಏ.2ರಂದು ನವದೆಹಲಿಯಲ್ಲಿ ನಡೆಯಲಿರುವ ಕಾರಣ ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್ ಆಗಮಿಸಲಿದ್ದಾರೆ.

ಭಾರತೀಯ ಸಂಸ್ಕೃತಿ ಮತ್ತು ಯಹೂದಿ ಸಂಸ್ಕೃತಿ ವಿಭಿನ್ನವಾಗಿದ್ದು ನಾವು ಭಾರತೀಯರಿಂದ ಕಲಿಯುವುದು ಸಾಕಷ್ಟಿದೆ ಎಂದು ಅವರು ತಿಳಿಸಿದ್ದಾರೆ.

2021ರ ಜೂನ್‌ನಲ್ಲಿ ಬೆನೆಟ್ ಇಸ್ರೇಲ್‌ ಪ್ರಧಾನಮಂತ್ರಿಯಾದ ಬಳಿಕ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಗ್ಲಾಸ್ಗೋದಲ್ಲಿ ನಡೆದ ಯುಎನ್ ಹವಾಮಾನ ಬದಲಾವಣೆ ಸಮ್ಮೇಳನದ (COP26) ಭಾಗದಲ್ಲಿ ಉಭಯ ನಾಯಕರು ಮೊದಲು ಭೇಟಿಯಾಗಿದ್ದರು. ಅಲ್ಲಿ ಪ್ರಧಾನಿ ಮೋದಿ ಅವರು ಭಾರತಕ್ಕೆ ಅಧಿಕೃತ ಭೇಟಿ ನೀಡಲು ಬೆನೆಟ್ ಅವರನ್ನು ಆಹ್ವಾನಿಸಿದ್ದರು.

- Advertisement -

Latest News

error: Content is protected !!