- Advertisement -
![]()
- Advertisement -
ಈಶ್ವರಮಂಗಲ: ಪುತ್ತೂರಿನಿಂದ ಈಶ್ವರಮಂಗಲ ಕಡೆಗೆ ಹೋಗುತ್ತಿದ್ದ ಸರಕಾರಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಮನೆ ಮೇಲೆ ಬಿದ್ದ ಘಟನೆ ಈಶ್ವರಮಂಗಲದ ಸಮೀಪ ಸಾಂತ್ಯ ಎಂಬಲ್ಲಿ ನಡೆದಿದೆ.

ಈ ವೇಳೆ ಬಸ್ಸಿನಲ್ಲಿ ಸುಮಾರು 21 ಜನ ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ. ಬಸ್ ಚಾಲಕ ಹಾಗೂ ನಿರ್ವಾಹಕನಿಗೆ ಸಣ್ಣ ಪುಟ್ಟ ಗಾಯವಾಗಿದೆ. ಘಟನೆಯ ಪರಿಣಾಮ ಮನೆಯ ಹಂಚುಗಳು ಪುಡಿಯಾಗಿದ್ದು ಗೋಡೆಗಳಿಗೂ ಹಾನಿಯಾಗಿದೆ. ಮನೆ ಮಂದಿಯೂ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.

ಮಂಜುನಾಥ ರೈ ಎಂಬವರ ಮನೆಯ ಬದಿಯ ದನದ ಹಟ್ಟಿಯ ಮೇಲೆ ಪಲ್ಟಿಯಾಗಿದೆ. ಬಸ್ ಉರುಳಿ ಬಿದ್ದ ಜಾಗದಲ್ಲಿ ಮನೆಮಂದಿ ಯಾರೂ ಇರದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಕೋವಿಡ್ ಕಳವಳದ ಕಾರಣ ಬಸ್ ನಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇರಲಿಲ್ಲ ಎನ್ನಲಾಗಿದೆ.

- Advertisement -


