Monday, May 20, 2024
Homeಕರಾವಳಿಬೆಳ್ತಂಗಡಿ: ತಾಲೂಕಿನ ಚರ್ಚ್ ಗಳಲ್ಲಿ ಜೂ.13 ರಿಂದ ಬಲಿಪೂಜೆ ಆರಂಭ

ಬೆಳ್ತಂಗಡಿ: ತಾಲೂಕಿನ ಚರ್ಚ್ ಗಳಲ್ಲಿ ಜೂ.13 ರಿಂದ ಬಲಿಪೂಜೆ ಆರಂಭ

spot_img
- Advertisement -
- Advertisement -

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಎಲ್ಲಾ ಚರ್ಚ್ ಗಳಲ್ಲಿ ಜೂನ್ 13ರಿಂದ ಬಲಿ ಪೂಜೆ ಗಳು ನಡೆಯಲಿದೆ. ಬಲಿ ಪೂಜೆ ಪ್ರಾರಂಭ ದ ಇನ್ನೆಲೆ ಯಲ್ಲಿ ಸಕಲ ಸಿದ್ಧತೆ ಗಳನ್ನು ಕೈಗೊಳ್ಳಲಾಗಿದೆ.

ಕೊರೊನ ಹರಡುವ ಹಿನ್ನೆಲೆಯಲ್ಲಿ ಸ್ಯಾನಿಟೈಸರ್, ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಬಲಿ ಪೂಜೆಗೆ ಹಾಜರಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಜನ ಸಂಖ್ಯೆ ಗನುಗುಣ ವಾಗಿ ಬಲಿ ಪೂಜೆ ಗಳ ಸಂಖ್ಯೆ ಹೆಚ್ಚಿಸಲಾಗಿದೆ.

10ವರ್ಷದೊಳಗಿನ ಮಕ್ಕಳಿಗೆ ಬಲಿ ಪೂಜೆ ಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಮತ್ತು ಭಾನುವಾರ ನಡೆಯುವ ಕ್ರೈಸ್ತ ಶಿಕ್ಷಣ ಇರುವುದಿಲ್ಲ. ವಯಸ್ಕರಿಗೆ ಭಾನುವಾರದ ಬದಲು ವಾರದ ಮಧ್ಯದಲ್ಲಿ ಮತ್ತು ಮನೆ ಗಳಲ್ಲಿಯೇ ಬಲಿ ಪೂಜೆ ಅರ್ಪಿಸಲು ವ್ಯವಸ್ಧೆ ಮಾಡಲಾಗಿದೆ.

ಈ ಎಲ್ಲಾ ವ್ಯವಸ್ಧೆ ಯನ್ನು ಪಾಲನಾ ಮಂಡಳಿ ಮತ್ತು ಸಂಘ ಸಂಸ್ಥೆ ಗಳು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಬೆಳ್ತಂಗಡಿ ತಾಲೂಕು ವಲಯದ ಪ್ರಧಾನ ಧರ್ಮ ಗುರುಗಳಾದ ವಿಗಾರ್ ವಾರ್ ವಂ ಫಾ. ಬೋನವೆಂಚರ್ ನಜ್ರೆ ತ್, ಹೊಲಿ ರೆಡೀಮರ್ ಚರ್ಚ್ ಬೆಳ್ತಂಗಡಿ ಇವರು ತಿಳಿಸಿದ್ದಾರೆ

- Advertisement -
spot_img

Latest News

error: Content is protected !!