Friday, June 5, 2026
Homeಕರಾವಳಿಡಿಕೆ ಶಿವಕುಮಾರ್ ಧರ್ಮಸ್ಥಳ ಭೇಟಿ ರದ್ದು: ಪ್ರತಿಕೂಲ ವಾತಾವರಣ ಹೆಲಿಕಾಪ್ಟರ್ ಅರ್ಧದಿಂದ ವಾಪಾಸ್

ಡಿಕೆ ಶಿವಕುಮಾರ್ ಧರ್ಮಸ್ಥಳ ಭೇಟಿ ರದ್ದು: ಪ್ರತಿಕೂಲ ವಾತಾವರಣ ಹೆಲಿಕಾಪ್ಟರ್ ಅರ್ಧದಿಂದ ವಾಪಾಸ್

- Advertisement -
- Advertisement -

ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಭೇಟಿಗೆ ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಹೊರಟಿದ್ದ ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರು ಮೋಡ ಹಾಗೂ ಮಳೆ ವಾತಾವರಣ ಕಾರಣದಿಂದಾಗಿ ಅರ್ಧದಿಂದ ವಾಪಾಸಾಗಿದ್ದಾರೆ.

ಅವರು 10.50ಕ್ಕೆ ಬೆಂಗಳೂರಿನಿಂದ ಹೊರಟು ನೇರವಾಗಿ ಧರ್ಮಸ್ಥಳಕ್ಕೆ ಬರಬೇಕಿತ್ತು. ಧರ್ಮಸ್ಥಳದ ಹೆಲಿಪ್ಯಾಡ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ಜೊತೆ ಮಾಜಿ ಶಾಸಕ ವಸಂತ ಬಂಗೇರ, ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಗೌಡ, ಮಾಜಿ ಸಚಿವ ಗಂಗಾಧರ ಗೌಡ, ಮಾಜಿ ಸಚಿವ ಅಭಯಚಂದ್ರ ಜೈನ್, ಯು.ಟಿ. ಖಾದರ್, ಧರ್ಮಸ್ಥಳ ಗ್ರಾಂ.ಪಂ. ಅಧ್ಯಕ್ಷ ಚಂದನ್ ಕಾಮತ್, ಧರ್ಮಸ್ಥಳ ಗ್ರಾಂ.ಪಂ. ಸದಸ್ಯ ಟಿ. ವಿ ದೇವಸ್ಯ, ಧರ್ಮಸ್ಥಳ ಗ್ರಾಂ.ಪಂ. ಸದಸ್ಯ ಅಬೂಬಕರ್ ಸಿದ್ಧಿಕ್, ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ಭರತ್, ಎ.ಪಿ.ಎಂ.ಸಿ. ಅಧ್ಯಕ್ಷ ಕೇಶವ ಬೆಳಾಲು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮಾನಂದ ಶೆಟ್ಟಿ ಮತ್ತಿತರರು ಹಲವು ಕಾರ್ಯಕರ್ತರು, ಮುಖಂಡರು ಕಾಯುತ್ತಿದ್ದರು.

11.15ರ ಹೊತ್ತಿಗೆ ಡಿ.ಕೆ.ಶಿ ಹೆಲಿಕಾಪ್ಟರ್ ಹಿಂತಿರುಗಿ ಹೋದ ಮಾಹಿತಿ ತಲುಪಿದ ಹಿನ್ನಲೆಯಲ್ಲಿ ಈ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ವಾಪಾಸಾದರು.

- Advertisement -

Latest News

error: Content is protected !!