Friday, June 26, 2026
Homeಮನರಂಜನೆಬಿಗ್ ಬಾಸ್ ಸೀಸನ್ 8 ನಲ್ಲಿ ಭಾಗಿಯಾಗ್ತಾರಾ ಡ್ರೋನ್ ಪ್ರತಾಪ್?

ಬಿಗ್ ಬಾಸ್ ಸೀಸನ್ 8 ನಲ್ಲಿ ಭಾಗಿಯಾಗ್ತಾರಾ ಡ್ರೋನ್ ಪ್ರತಾಪ್?

- Advertisement -
- Advertisement -

ಬೆಂಗಳೂರು : ಕನ್ನಡ ಬಿಗ್ ಬಾಸ್ ಸೀಸನ್ 8 ಅತೀ ಶೀಘ್ರದಲ್ಲಿ ಆರಂಭವಾಗುತ್ತದೆ ಅನ್ನೋ ಬಗ್ಗೆ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಅಲ್ಲದೇ ಬಿಗ್ ಬಾಸ್ ಸೀಸನ್ 8 ಗೆ ತೆರೆಯ ಹಿಂದೆ ಈಗಾಗಲೇ ಸಿದ್ಧತೆಗಳು ಕೂಡ ಆರಂಭವಾಗಿದೆ ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಲೇ ಇದೆ. ಹೀಗಿರುವಾಗಲೇ ದೊಡ್ಡ ಮನೆಯೊಳಗೆ ಪ್ರವೇಶ ಮಾಡುವುದರ ಬಗ್ಗೆ ವ್ಯಕ್ತಿಯೊಬ್ಬರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.

ಅಂದ್ಹಾಗೆ ಅದು ಬೇರೆ ಯಾರು ಅಲ್ಲ. ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿರುವ ಡ್ರೋನ್ ಪ್ರತಾಪ್ ಅವರು. ಯೆಸ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯೊಳಗೆ ಹೋಗ್ತಾರೆ ಅನ್ನೋ ಗುಸು ಗುಸು ಸುದ್ದಿ ಇದೀಗ ಜೋರಾಗಿ ಕೇಳಿ ಬರುತ್ತಲೇ ಇದೆ. ಆದ್ರೆ ಪ್ರತಾಪ್ ಮನೆಯೊಳಗೆ ಹೋದ್ರೆ ಮನರಂಜನೆ ಮಾತ್ರ ಪಕ್ಕಾ ಅಂತಿದ್ದಾರೆ ಜನ. ಆದ್ರೆ ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.

- Advertisement -

Latest News

error: Content is protected !!