Monday, June 8, 2026
Homeತಾಜಾ ಸುದ್ದಿಮುಖ ನೋಡದೇ ಡೇಟಿಂಗ್​ ಆಸೆಗೆ ಬಿದ್ದ ಭೂಪ, ಕಳೆದುಕೊಂಡಿದ್ದು 12 ಸಾವಿರ ರೂಪಾಯಿ

ಮುಖ ನೋಡದೇ ಡೇಟಿಂಗ್​ ಆಸೆಗೆ ಬಿದ್ದ ಭೂಪ, ಕಳೆದುಕೊಂಡಿದ್ದು 12 ಸಾವಿರ ರೂಪಾಯಿ

- Advertisement -
- Advertisement -

ಬೆಂಗಳೂರು: ಏಕಾಂತವಾಗಿ ಕಾಲಕಳೆಯಲು ಸಿಗುವುದಾಗಿ ಯುವಕನಿಗೆ ಆಮಿಷವೊಡ್ಡಿದ ಆನ್ಲೈನ್ ಗೆಳತಿ 12 ಸಾವಿರ ರೂ. ಪಡೆದು ವಂಚಿಸಿದ್ದಾಳೆ. ಅಮೃತಹಳ್ಳಿಯ ನಿವಾಸಿ ಖಾಸಗಿ ಸಂಸ್ಥೆ ನೌಕರನಾದ 29 ವರ್ಷದ ಯುವಕ ವಂಚನೆಗೆ ಒಳಗಾದವ.

ಅಪರಿಚಿತ ನಂಬರ್​ಗಳಿಂದ ಯುವಕನಿಗೆ ಕರೆ ಮಾಡಿದ್ದ ಮಹಿಳೆ, ಟೀನಾ ಎಂದು ಪರಿಚಯಿಸಿಕೊಂಡಿದ್ದಳು. ಏಕಾಂತವಾಗಿ ಕಾಲಕಳೆಯುವ ಸೇವೆ ಒದಗಿಸುತ್ತೇನೆ. ನೋಂದಣಿ ಶುಲ್ಕ 850 ರೂ. ಆಗುತ್ತದೆ ಎಂದಿದ್ದಳು.

ಬಳಿಕ ಖುಷ್ಬೂ ಎಂಬ ಹೆಸರಿನಲ್ಲಿ ಕರೆ ಮಾಡಿದ್ದ ಮತ್ತೊಬ್ಬಾಕೆ ಭದ್ರತಾ ಠೇವಣಿಗೆ 11,200 ರೂ. ಪಾವತಿಸಲು ಸೂಚಿಸಿದ್ದಳು. ನಂಬಿದ ಯುವಕ ಆನ್​ಲೈನ್​ನಲ್ಲಿ 12,050 ರೂ. ವರ್ಗಾಯಿಸಿದ್ದಾನೆ. ಹಣ ಪಡೆದ ಬಳಿಕ ಮಹಿಳೆಯರು ಸಂಪರ್ಕಕ್ಕೆ ಸಿಗದಿದ್ದಾಗ ಪೊಲೀಸರಿಗೆ ದೂರು ಕೊಟ್ಟಿದ್ದಾನೆ.

- Advertisement -

Latest News

error: Content is protected !!