Friday, June 5, 2026
Homeಕರಾವಳಿಉಡುಪಿಉಡುಪಿ: ಸತ್ತ ಹಸುಗಳನ್ನು ಕಟ್ಟಿ ಎಳೆದೊಯ್ದ ಐಆರ್‌‌‌‌ಬಿ ಟೋಯಿಂಗ್‌‌‌‌ ವಾಹನ

ಉಡುಪಿ: ಸತ್ತ ಹಸುಗಳನ್ನು ಕಟ್ಟಿ ಎಳೆದೊಯ್ದ ಐಆರ್‌‌‌‌ಬಿ ಟೋಯಿಂಗ್‌‌‌‌ ವಾಹನ

- Advertisement -
- Advertisement -

ಉಡುಪಿ: ಐಆರ್‌‌‌‌ಬಿ ಟೋಯಿಂಗ್‌‌‌‌ ವಾಹನಕ್ಕೆ ಸತ್ತ ಹಸುಗಳನ್ನು ಕಟ್ಟಿ ಎಳೆದೊಯ್ದ ಘಟನೆ ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸತ್ತು ಬಿದ್ದಿದ್ದ ಎರಡು ಹಸುಗಳನ್ನು ವಾಹನಕ್ಕೆ ಹಾಕಿ ಸಾಗಿಸುವ ಬದಲು ಟೋಯಿಂಗ್‌‌‌‌ ಗಾಡಿಗೆ ಕಟ್ಟಿ ಎಳೆದೊಯ್ದಿದ್ದಾರೆ. ಸತ್ತ ಹಸುಗಳನ್ನು ಟೋಯಿಂಗ್‌ ವಾಹನದ ಮೂಲಕ ಎಳೆದೊಯ್ಯುವ ವಿಡಿಯೋ ವೈರಲ್‌ ಆಗಿದೆ.

ಈ ಬಗ್ಗೆ ಬೈಂದೂರು ಹಿಂದೂ ಜಾಗರಣ ವೇದಿಕೆ ಐಆರ್‌ಬಿ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, “ಹಸುಗಳನ್ನು ಈ ರೀತಿಯಾಗಿ ಬಿದಿಬೀದಿಗಳಲ್ಲಿ ಎಳೆದುಕೊಂಡು ಹೋಗುವ ಹೇಯ ಕೃತ್ಯಕ್ಕೆ ನಾಚಿಕೆಯಾಗಬೇಕು. ನಿಮಗೆ ಗೋವಿನ ಶಾಪ ತಟ್ಟದೆ ಇರುವುದಿಲ್ಲ” ಎಂದಿದ್ದಾರೆ. “ನಿಮ್ಮ ಬೇಜಾವಾಬ್ದಾರಿತನದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಇದರ ವಿರುದ್ದ ಹಿಂದೂ ಸಂಘಟನೆ ಪ್ರತಿಭಟನೆ ನಡೆಸಲಿದೆ” ಎಂದು ಹೇಳಿದೆ.

- Advertisement -

Latest News

error: Content is protected !!