ಮಂಗಳೂರು: ಅವಳಿ ಮಕ್ಕಳಿದ್ದರೆ ಕಂಡುಹಿಡಿಯುವುದು ಬಹಳ ಕಷ್ಟ. ಒಂದು ಅಥವಾ ಎರಡು ಜೋಡಿಯನ್ನು ನಾವು ಶಾಲಾ ಕಾಲೇಜುಗಳಲ್ಲಿ ಕಾಣಬಹುದು. ಆದರೆ ಇಲ್ಲೊಂದು ಶಾಲೆಯಲ್ಲಿ 11 ಜೋಡಿ ಅವಳಿ ಮಕ್ಕಳು, ಗುರುತು ಹಿಡಿಯುವುದೇ ಸವಾಲು. ಸಾಮಾನ್ಯವಾಗಿ ನಾವು ಒಂದು ಶಾಲೆಯಲ್ಲಿ ಒಂದು ಅಥವಾ ಎರಡು ಜೋಡಿ ಅವಳಿ ಮಕ್ಕಳನ್ನು ಕಾಣಬಹುದು. ಆದರೆ ಇಲ್ಲೊಂದು ಶಾಲೆಯಲ್ಲಿ 11 ಜೋಡಿ ಅವಳಿ ವಿದ್ಯಾರ್ಥಿಗಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದಲ್ಲಿರುವ ಕೈರಂಗಳದ ಪುಣ್ಯಕೋಟಿ ನಗರದಲ್ಲಿರುವ ಶ್ರೀ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲೇ ಈ 11 ಅವಳಿ ಮಕ್ಕಳು ಇರುವುದು.
4ನೇ ತರಗತಿಯಲ್ಲಿ 3 ಜೋಡಿ, 5ನೇ ತರಗತಿಯಲ್ಲಿ 2, 6, 7, 8 ಮತ್ತು 10ನೇ ತರಗತಿಯಲ್ಲಿ ತಲಾ 1 ಹಾಗೂ ಪಿಯುಸಿಯಲ್ಲಿ 2 ಜೋಡಿ ಅವಳಿಗಳಿದ್ದಾರೆ.
4ನೇ ತರಗತಿಯಲ್ಲಿ ಜ್ಞಾನೇಶ್- ಜಯೇಶ್, ಸಂಜನ- ಸಂಜಯ, ಲತೇಶ್- ಲವೇಶ್, 5ನೇ ತರಗತಿಯಲ್ಲಿ ಧನ್ಯಶ್ರೀ- ಧನುಷ್, ಚೈತ್ರಾ- ಚಂದನ, 6ನೇ ತರಗತಿಯಲ್ಲಿ ಭವ್ಯಶ್ರೀ- ದಿವ್ಯಶ್ರೀ, 7ನೇ ತರಗತಿಯಲ್ಲಿ ಕೀರ್ತಿ- ಕೀರ್ತನಾ, 8ನೇ ತರಗತಿಯಲ್ಲಿ ಸುಜನ- ಸುಹನ, 10ನೇ ತರಗತಿಯಲ್ಲಿ ಶ್ರೀನಾಥ್- ಸುಶಾಂತ್, ದ್ವಿತೀಯ ಪಿಯುಸಿಯಲ್ಲಿ ಪ್ರೇಕ್ಷಾ – ಪ್ರಜ್ಞಾ, ಮೋಕ್ಷಾ- ಮೋಕ್ಷಿತಾ ಎಂಬ ಅವಳಿಗಳಿದ್ದಾರೆ.
ಈ ಶಾಲೆ ಈ ಕಾರಣಕ್ಕೆ ಎಲ್ಲರ ಗಮನ ಸೆಳೆದಿದೆ. ಬೇರೆಲ್ಲೂ ಸಾಮಾನ್ಯವಾಗಿ ಅವಳು ಮಕ್ಕಳು ಇಷ್ಟು ಸಂಖ್ಯೆಯಲ್ಲಿ ಕಾಣಲು ಸಾಧ್ಯವಿಲ್ಲ. ಅಪರೂಪ ತುಂಬಾ.


