Saturday, May 18, 2024
Homeಕರಾವಳಿಉಡುಪಿಬ್ರಹ್ಮಾವರ: ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ರೋಡ್ ರೋಲರ್‌ಗೆ ಢಿಕ್ಕಿ, ತಂದೆ ಸಾವು, ಮಗಳು ಗಂಭೀರ !

ಬ್ರಹ್ಮಾವರ: ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ರೋಡ್ ರೋಲರ್‌ಗೆ ಢಿಕ್ಕಿ, ತಂದೆ ಸಾವು, ಮಗಳು ಗಂಭೀರ !

spot_img
- Advertisement -
- Advertisement -

ಬ್ರಹ್ಮಾವರ: ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ರೋಡ್ ರೋಲರ್‌ಗೆ ಢಿಕ್ಕಿ ಹೊಡೆದ ಪರಿಣಾಮ ತಂದೆ ಮೃತಪಟ್ಟು, ಮಗಳು ತೀವ್ರವಾಗಿ ಗಾಯಗೊಂಡ ಘಟನೆ ಉಳ್ಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ರ ಸಂತೆಕಟ್ಟೆ ಸೇತುವೆಯಲ್ಲಿ ಈ ಘಟನೆ ನಡೆದಿದೆ.

ಉಡುಪಿಯಲ್ಲಿ ವಿದ್ಯಾರ್ಥಿ ವೇತನ ವಿತರಣಾ ಸಭೆಗೆ ತಂದೆ ಮಗಳು ಸ್ಕೂಟರ್‌ನಲ್ಲಿ ಕುಂದಾಪುರದಿಂದ ಉಡುಪಿ ಕಡೆ ಹೋಗುತ್ತಿದ್ದರು. ಈ ವೇಳೆ ಸಂತೆಕಟ್ಟೆ ಸೇತುವೆಯಲ್ಲಿ ಎದುರಿನಲ್ಲಿ ಹೋಗುತ್ತಿದ್ದ ರೋಡ್ ರೋಲರನ ಬದಿಗೆ ಈ ಸ್ಕೂಟರ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ದ್ವಿಚಕ್ರ ವಾಹನ ಸಮೇತ ಸವಾರರಿಬ್ಬರು ರಸ್ತೆಗೆ ಬಿದ್ದರು.

ಕುಂದಾಪುರ ನೇರಳಕಟ್ಟೆ ಕುಕ್ಕುಂಜೆ ನಿವಾಸಿ ವೆಂಕಟರಮಣ ಆಚಾರ್ಯ (55) ಸ್ಕೂಟರ್ ನಲ್ಲಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರ ಮಗಳು ಹಿಂಬದಿ ಸವಾರೆ ಭವ್ಯಶ್ರೀ ( 17 ) ತೀವ್ರವಾಗಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಸ್ಕೂಟರ್ ಸವಾರ ವೆಂಕಟ ರಮಣ ಆಚಾರ್ಯ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಕುರಿತು ಪ್ರಕರಣ ದಾಖಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!