Friday, October 11, 2024
Homeತಾಜಾ ಸುದ್ದಿನಿಮಗೆ ಗೊತ್ತಿಲ್ಲದ ಬೆಂಗಳೂರಿನ 'ಪಾದರಾಯನಪುರ'ದ ಇಂಟ್ರೆಸ್ಟಿಂಗ್ ಸುದ್ದಿ !

ನಿಮಗೆ ಗೊತ್ತಿಲ್ಲದ ಬೆಂಗಳೂರಿನ ‘ಪಾದರಾಯನಪುರ’ದ ಇಂಟ್ರೆಸ್ಟಿಂಗ್ ಸುದ್ದಿ !

spot_img
- Advertisement -
- Advertisement -

ಅಲ್ಲಿನ ಅರಳಿಕಟ್ಟೆಯಲ್ಲಿರುವ ನಾಲ್ಕು ಅಡಿ ಎತ್ತರದ ಪಾದರಾಯಸ್ವಾಮಿ ದೇಗುಳ. ಆಂಜನೇಯನ ಪಾದ ಇದ್ದ ಗುರುತಿಗೆ ಅಲ್ಲಿನವರು ಗುಡಿಕಟ್ಟಿದ್ದರು . ಅಲ್ಲಿನ ಇಡೀ ಕೇರಿಯಲ್ಲಿದ್ದವರು ಬರೀ ಹಿಂದುಗಳು. ಹಾಗೆಂದೇ ಆ ಪ್ರದೇಶವನ್ನು ಪಾದರಾಯನಪುರ ಎನ್ನುತ್ತಿದ್ದರು.

ಈಗ ಅಲ್ಲಿ ಅನಾಥವಾಗಿ ಪಾದರಾಯಸ್ವಾಮಿ ಗುಡಿ ಉಳಿದಿದೆ, ಹಿಂದುಗಳೆಲ್ಲ ಖಾಲಿಯಾಗಿದ್ದಾರೆ, ಈಗ ಅಲ್ಲಿ ಅರಾಫತ್ ನಗರ, ಟಿಪ್ಪು ನಗರ, ಮೆಹಬೂಬ್ ನಗರಗಳು ತಲೆಯಿತ್ತಿವೆ. ಈಗ ಆ ವಾರ್ಡನ್ನು ಮಾತ್ರ ಪಾದರಾಯನ ಪುರ ಎಂದು ಕರೆಯಲಾಗುತ್ತದೆ. ಕೇವಲ ಪಾದರಾಯನ ಪುರ ಮಾತ್ರವಲ್ಲ, ಪಕ್ಕದ ಬಾಪೂಜಿ ನಗರ, ಇತ್ತ ಜಗಜೀವನರಾಮ ನಗರವನ್ನೂ ಮುಸ್ಲೀಮರು ಆವರಿಸಿದ್ದಾರೆ.

ಮೊದಲು ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ವಕ್ಕಲಿಗರು, ನೇಕಾರರು, ದಲಿತರು ಇದ್ದರು… ಅನೇಕ ಕನ್ನಡ ಚಳವಳಿಗಾರರು ಇಲ್ಲಿನವರೇ ಆಗಿದ್ದರು. ವಾಟಾಳ್ ನಾಗರಾಜ್, ಕನ್ನಡ ಚಳವಳಿಯ ನಾರಾಯಣ್ ಇಲ್ಲಿಂದಲೇ ಚುನಾವಣೆ ಗೆದ್ದಿದ್ದರು. ಇದೇ ಬಿನ್ನಿಪೇಟೆಯಿಂದಲೇ ಪೌರಕಾರ್ಮಿಕರ ಹೋರಾಟಗಾರ ಐ ಪಿ ಡಿ ( ಐವರ ಪಳ್ಳಿ ದೊಡ್ಡ ) ಸಾಲಪ್ಪ ಶಾಸಕರಾಗಿ ಗೆದ್ದಿದ್ದರು. ಮೀಸಲು ಅಲ್ಲದ ಸಾಮಾನ್ಯ ಕ್ಷೇತ್ರದಲ್ಲಿ 1978ರಲ್ಲಿ ಸಾಲಪ್ಪ ಗೆದ್ದು ದಾಖಲೆ ನಿರ್ಮಿಸಿದ್ದರು. ( ಈಗಲೂ ಮಹಾನಗರಪಾಲಿಕೆಯ ಆವರಣದಲ್ಲಿ ಸಾಲಪ್ಪನವರ ಪ್ರತಿಮೆ ನೋಡಬಹುದು. ) ಸಾಲಪ್ಪನವರು ಆ ಸಂದರ್ಭದಲ್ಲೇ ದೇವರಾಜ ಅರಸು ನಗರ ನಿರ್ಮಿಸಿ ನೂರಾರು ಪೌರಕಾರ್ಮಿಕರಿಗೆ ಮನೆ ಸಿಗುವಂತೆ ಮಾಡಿದ್ದರು.

1994ರಲ್ಲಿ ಉರ್ದು ವಾರ್ತೆ ವಿಷಯದಲ್ಲಿ ಆದ ಗಲಭೆಯಲ್ಲಿ 14 ಹಿಂದುಗಳು ಪ್ರಾಣ ಕಳೆದುಕೊಂಡರು . ಆನಂತರದ ಚಿತ್ರಣವೇ ಬದಲಾಯಿತು.

ಹಿಂದುಗಳು ಮನೆ, ಜಾಗವನ್ನು ಬಂದ ರೇಟಿಗೆ ಕೊಟ್ಟು ಖಾಲಿ ಮಾಡಿದರು. ಸಾವಿರದ ಇನ್ನೂರಕ್ಕೂ ಹೆಚ್ಚು ಬಟ್ಟೆ ನೇಯುವ ಮಗ್ಗಗಳಿದ್ದ ಜಾಗದಲ್ಲಿ ಈಗ ನಾಲ್ಕೊ, ಐದೊ ಮಗ್ಗಗಳು ಉಳಿದಿವೆ. ಸಾಲಪ್ಪನವರು ಕಟ್ಟಿದ ದೇವರಾಜ ಅರಸು ನಗರದಲ್ಲೂ ಪೌರಕಾರ್ಮಿಕರು ಉಳಿದಿಲ್ಲ. ಅಲ್ಲಿಯೂ ಮುಸ್ಲೀಮರು ಒತ್ತರಿಸಿಕೊಂಡಿದ್ದಾರೆ.

ಹಿಂದುಗಳ ಜಾಗ, ಮನೆ ಖರೀಧಿಸಿ, ರಿಜಿಸ್ಟ್ರೇಶನ್ ಖರ್ಚು ನಮ್ಮದು ಎಂದು ಮಸೀದಿಗಳಲ್ಲಿ ಒಳ ಸಂದೇಶ ಕೊಡಲಾಯಿತು. ಈಗಲೂ ಹಿಂದುಗಳ ಜಾಗ ಕೊಳ್ಳುವವರಿಗೆ ಮಸೀದಿ, ಶಾಸಕರು ಸಹಾಯ ಇದ್ದೇ ಇರುತ್ತದೆ.

ಈಗ ಅಷ್ಟೂ, ಇಷ್ಟೂ ಉಳಿದಿರೊದು ಸಣ್ಣ, ಪುಟ್ಟ ಹಿಂದು ಜಾತಿಗಳವರೂ ಮತ್ತು ಪೌರಕಾರ್ಮಿಕರು ಮಾತ್ರ. ಈಗ ಇಲ್ಲಿ ಹಿಂದುಗಳೆ ಅಲ್ಪ ಸಂಖ್ಯಾತರು, ಕನ್ನಡದ ಧ್ವನಿಯೂ ಇಲ್ಲ, ಮಗ್ಗದ ಧ್ವನಿಯೂ ಇಲ್ಲ, ಸಾಲಪ್ಪನವರ ಹೋರಾಟದ ಧ್ವನಿಯೂ ಇಲ್ಲ.

ಈಗ ಇಲ್ಲಿ 14 ದೊಡ್ಡ ಮಸೀದಿಗಳು ಸೇರಿದಂತೆ 52 ಮಸೀದಿಗಳಿವೆ. ಇಲ್ಲಿಯೇ ಬರುವ ಗೌರಿಪಾಳ್ಯದ ಮಸೀದಿಯಲ್ಲಿ ತಬ್ಲಿಘಿ ಜಾಮಾತ್ ನಿಂದ ಬಂದ ಇಂಡೊನೇಷ್ಯದ 10 ಹಾಗು ಕಜಗಿಸ್ತಾನದ 9 ಮೌಲ್ವಿಗಳು ಅಡಗಿ ಕುಳಿತ್ತಿದ್ದರು. ಎಪ್ರಿಲ್ 3ರಂದು ಪೋಲೀಸ್ ಧಾಳಿ ನೆಡಸಿ ಅವರನ್ನು ಹಿಡಿದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಮೂರು ಕಿಮೀ ವ್ಯಾಪ್ತಿ ಪ್ರದೇಶದಲ್ಲಿ 23 ಕೊರಾನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಮತ್ತೂ ರೋಗ ಹರಡದಂತೆ ತಡೆಯಲೂ ಆರೋಗ್ಯ ಕಾರ್ಯಕರ್ತರು ಬಂದದ್ದು ಅಲ್ಲಿನವರ ರಂಪಾಟಕ್ಕೆ ಕಾರಣವಾಗಿದೆ. ಈಗ ಅಲ್ಲಿರುವ ಅಲ್ಪ ಸ್ವಲ್ಪ ಹಿಂದುಗಳಿಗೆ ಈ ನರಕದಲ್ಲಿ ಬದುಕುವುದು ಹೇಗಪ್ಪ ಎಂಬಂತಾಗಿದೆ.

- Advertisement -
spot_img

Latest News

error: Content is protected !!