Saturday, March 2, 2024
Homeಆರಾಧನಾಲಾಕ್ ಡೌನ್ ಸಮಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯವರ ದಿನಚರಿ ಹೇಗಿರುತ್ತೆ ?

ಲಾಕ್ ಡೌನ್ ಸಮಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯವರ ದಿನಚರಿ ಹೇಗಿರುತ್ತೆ ?

spot_img
spot_img
- Advertisement -
- Advertisement -

ಧರ್ಮಸ್ಥಳ: ಲಾಕ್‌ಡೌನ್‌ ಘೋಷಣೆಯಾದ ಬಳಿಕ ನಾನು ಧರ್ಮಸ್ಥಳದ ಮಹಾದ್ವಾರ ದಾಟಿ ಹೊರ ಹೋಗಿಲ್ಲ. ಬಸದಿ ಹಾಗೂ ಮ್ಯೂಸಿಯಂ ಗೇಟನ್ನೂ ಮೀರಿ ಹೋಗಿಲ್ಲ. ನನ್ನ ಬೀಡು(ಮನೆ), ದೇವಸ್ಥಾನ, ಗ್ರಂಥಾಲಯ, ಮ್ಯೂಸಿಯಂ ಬಿಟ್ಟರೆ ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದೇನೆ ಎಂಬುವುದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ಪದ್ಮವಿಭೂಷಣ ಪುರಸ್ಕೃತ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ಮಾತು​ಗ​ಳು.
ಲಾಕ್ ಡೌನ್ ಸಮಯದಲ್ಲಿ ಧರ್ಮಸ್ಥಳದ ಬೀಡಿನಲ್ಲೇ ಕಾಲ ಕಳೆಯುತ್ತಿರುವ ಪೂಜ್ಯ ಖಾವಂದರು, ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವ್ರಧ್ದಿ ಯೋಜನೆ ವತಿಯಿಂದ ಈಗಾಗಲೇ ಪ್ರಧಾನಮಂತ್ರಿ ಪರಿಹಾರ ನಿಧಿಗೆ 5 ಕೋಟಿ ರೂ ನೀಡುವ ಮೂಲಕ ಸಾಮಾಜಿಕ ಕಳಕಳಿಯಲ್ಲಿ ತಾವೆಂದು ಮುಂದು ಎಂಬುವುದನ್ನು ಮತ್ತೊಮ್ಮೆ ಸಾದರಪಡಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೋವಿಡ್ ಪರಿಹಾರನಿಧಿಗೆ 5 ಕೋಟಿ ರೂ ದೇಣಿಗೆ

ಸದಾ ಭಕ್ತರಿಂದ ತುಂಬಿರುತ್ತಿದ್ದ ಕ್ಷೇತ್ರ ಈಗ ಖಾಲಿ, ಖಾಲಿ. ಗ್ರಾಮಾಭಿವೃದ್ಧಿ ಯೋಜನೆ, ಶೈಕ್ಷಣಿಕ ಸಂಸ್ಥೆಗಳ ಸಭೆಯೂ ನಡೆಯುತ್ತಿಲ್ಲ. ಎಲ್ಲರೂ ಅವರವರ ಮನೆಯಲ್ಲೇ ಇದ್ದು ಲಾಕ್‌ಡೌನ್‌ ಪಾಲಿಸುವಂತೆ ಹೇಳಿದ್ದೇನೆ. ಇದನ್ನು ಚಾಚೂ ತಪ್ಪದೆ ಎಲ್ಲರೂ ಪಾಲಿಸುತ್ತಿದ್ದಾರೆ. ಶೇ.99.99ರಷ್ಟುಇದು ಪಾಲನೆಯಾಗುತ್ತಿದೆ ಎಂಬ ಹೆಮ್ಮೆ ಮತ್ತು ಸಮಾಧಾನ ನನಗಿದೆ ಎಂದು ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.

ಪ್ರಧಾನಿ ಮೋದಿಯ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ ಡಾ. ಡಿ ವೀರೇಂದ್ರ ಹೆಗ್ಗಡೆ

ಪೂಜ್ಯರ ದಿನಚರಿ
ಬೆಳಗ್ಗೆ 6.30ಕ್ಕೆ ಉತ್ಥಾನ. ನಿತ್ಯಕರ್ಮ ಮುಗಿಸಿ ಎಲ್ಲ ಪತ್ರಿಕೆ . ನಂತರ ಯೋಗ. ಪೂಜೆ ನೆರವೇರಿಸಿ ಉಪಹಾರ. ಮಧ್ಯಾಹ್ನ ಹಾಗೂ ರಾತ್ರಿ ಕುಟುಂಬದವರೊಂದಿಗೆ ಸಹಭೋಜನ. ಮಧ್ಯಾಹ್ನ 1.30ಕ್ಕೆ ಭೋಜನವಾದರೆ, ನಂತರ 4ರವರೆಗೆ ವಿಶ್ರಾಂತಿ. ಹರಟುತ್ತಾ ಕುಟುಂಬದವರಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಮಧ್ಯಾಹ್ನದವರೆಗೆ ಗ್ರಂಥಗಳ ಓದುವಿಕೆ, ಆಗಾಗ ಟಿ.ವಿ. ನೋಡುತ್ತಾ ದೇಶ, ವಿದೇಶಗಳ ವಿದ್ಯಮಾನಗಳನ್ನು ಸುದ್ದಿಗಳನ್ನು ಗಮನಿಸುತ್ತಿರುತ್ತಾರೆ. ರಾತ್ರಿ ದೂರದರ್ಶನದಲ್ಲಿ ಪ್ರಸಾರವಾಗುವ ರಾಮಾಯಣ ಧಾರಾವಾಹಿಯನ್ನು ಕುಟುಂಬ ಸಮೇತ ವೀಕ್ಷಣೆ ಮತ್ತು ರಾತ್ರಿ ಊಟ ಆದ ಬಳಿಕ 9.30ಕ್ಕೆ ಮಲಗುತ್ತಾರೆ.

ಮೊಮ್ಮಕ್ಕಳೊಂದಿಗೆ ಮಗುವಂತಾಗುವ ಖಾವಂದರು

ಮೊಮ್ಮಕ್ಕಳೊಂದಿಗೆ ಚಿನ್ನಿದಾಂಡು ಸೇರಿ ವಿವಿಧ ಚಿನ್ನಾಟಗಳನ್ನು ಆಡುತ್ತಾರೆ ಎಂದರೆ ನೀವು ನಂಬಲೇಬೇಕು.

ಪುಸ್ತಕಗಳೊಂದಿಗೆ ಒಡನಾಟ

“ಬೀಡಿನಲ್ಲಿರುವ ಸಣ್ಣ ಗ್ರಂಥಾಲಯದಲ್ಲಿ ಪುಸ್ತಕದ ಒಡನಾಟ. ವಸುಧೇಂದ್ರರ ‘ತೇಜೋ ತುಂಗಭದ್ರ’ ಹಾಗೂ ಬೇರೆ ಬೇರೆ ಇಂಗ್ಲಿಷ್‌ ಕೃತಿಗಳನ್ನು ಓದಿದ್ದೇನೆ. ಬೌದ್ಧ ಭಿಕ್ಷು, ಜೈನ ಮತ್ತು ಹಿಂದೂ ಧರ್ಮದ ಅನೇಕ ಪುಸ್ತಕಗಳು, ಇಸ್ತಾಂಬುಲ್‌ ಪ್ರವಾಸಿ ಕಥನ, ಇಸ್ಕಾನ್‌, ರಾಮಾಯಣ ಹೀಗೆ ಹತ್ತುಹಲವು ಪುಸ್ತಕಗಳನ್ನು ಓದುತ್ತಾ ಶ್ರೀಮತಿ ಜತೆಗೆ ವಿಮರ್ಶೆ ನಡೆಸುತ್ತಿರುತ್ತೇನೆ. ಭಾಷಣಕ್ಕೆ ಬೇಕಾದ ವಿಷಯಗಳನ್ನು ನೋಟ್ಸ್‌ ಮಾಡಿಕೊಳ್ಳುತ್ತೇನೆ. ನಮ್ಮದೇ ಪ್ರಕಾಶನದಿಂದ ಹೊರತರುವ ಶಾಂತಿವನ ಟ್ರಸ್ಟ್, ಮಕ್ಕಳ ಪುಸ್ತಕಗಳಿಗೆ ಸಣ್ಣ ಕತೆಗಳನ್ನು ಬರೆಯುತ್ತಿದ್ದೇನೆ” ಎನ್ನುತ್ತಾರೆ ಪೂಜ್ಯರು.

- Advertisement -

Latest News

error: Content is protected !!