ಬೆಳ್ತಂಗಡಿ: “ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವವರನ್ನು ಪೊಲೀಸರು ಗುಂಡುಹಾರಿಸಿ ಕೊಲ್ಲಬೇಕು” ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.
ಪಾದರಾಯನಪುರದಲ್ಲಿ ನಡೆದ ಘಟನೆಯ ಕುರಿತಾಗಿ ಉದ್ವೇಗರಹಿತವಾಗಿ, ವಸ್ತುನಿಷ್ಠವಾಗಿ ಯೋಚಿಸಿ ಹೇಳುತ್ತಿದ್ದೇನೆ, “ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವವರನ್ನು ಪೊಲೀಸರು ಗುಂಡುಹಾರಿಸಿ ಕೊಲ್ಲಬೇಕು, ಇಲ್ಲದಿದ್ದರೆ ಇಂಥಹ ಘಟನೆಗಳು ನಿಲ್ಲಲು ಸಾಧ್ಯವೇ ಇಲ್ಲ” ಎಂದಿದ್ದಾರೆ.
ಈ ಕುರಿತಾಗಿ ಫೇಸ್‌ಬುಕ್‌ನಲ್ಲೂ ಅವರು ಪೋಸ್ಟ್ ಮಾಡಿದ್ದು ನಿನ್ನೆ ಪಾದರಾಯಪುರದಲ್ಲಿ ನಡೆದ ಘಟನೆಯನ್ನು ನೋಡಿ ಉದ್ವೇಗದಲ್ಲಿ, ನೋವಿನಿಂದ ಮಾತನಾಡುತ್ತಾ “ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವವರನ್ನು ಪೊಲೀಸರು ಗುಂಡು ಹಾರಿಸಿ ಕೊಂದರೂ ತಪ್ಪಿಲ್ಲ” ಎಂದು ಹೇಳಿದ್ದೆ. ಇಂದು ಉದ್ವೇಗರಹಿತವಾಗಿ, ವಸ್ತುನಿಷ್ಠವಾಗಿ ಯೋಚಿಸಿ ಹೇಳುತ್ತಿದ್ದೇನೆ, “ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವವರನ್ನು ಪೊಲೀಸರು ಗುಂಡುಹಾರಿಸಿ ಕೊಲ್ಲಬೇಕು, ಇಲ್ಲದಿದ್ದರೆ ಇಂಥಹ ಘಟನೆಗಳು ನಿಲ್ಲಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದಾರೆ.