ಬಂಟ್ವಾಳ: ತಾಲೂಕಿನ ತೆಂಕಕಜೆಕಾರು ಗ್ರಾಮದ ಪೈರು ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿರುವಲ್ಲಿಗೆ ಡಿಸಿಐಬಿ ವಿಭಾಗದ ನಿರೀಕ್ಷಕರು ಚೆಲುವರಾಜು ಮತ್ತು ಅವರ ಸಿಬ್ಬಂದಿಗಳ ತಂಡ ಇಂದು ಸಂಜೆ ದಾಳಿ ಮಾಡಿದ್ದು, 6 ಮಂದಿಯನ್ನು ಬಂಧಿಸಿ 2.15 ಲಕ್ಷ ರೂ ಹಣ ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಬಂಟ್ವಾಳ ಉಳಿ ಗ್ರಾಮದ ನಿವಾಸಿ ಮಹಮ್ಮದ್ ಮುಸ್ತಾಫ ಅಲಿಯಾಸ್ ಮುನ್ನ, ಬಂಟ್ವಾಳ ಮೂಡಪಡುಕೊಡಿ ಗ್ರಾಮದ ನಿವಾಸಿ ಹೈದರ್, ಬಂಟ್ವಾಳ ಕಾವಳಪಡೂರು ಗ್ರಾಮದ ನಿವಾಸಿ ಅಬ್ದುಲ್ ನವಾಝ್, ಬಂಟ್ವಾಳ ಬಡಗಕಜೆಕಾರು ಗ್ರಾಮದ ನಿವಾಸಿ ಜಾನ್ ಮೋರಾಸ್, ಬೆಳ್ತಂಗಡಿ ಸೋಣಂದೂರು ಗ್ರಾಮದ ನಿವಾಸಿ ಶಬೀರ್, ಬೆಳ್ತಂಗಡಿ ಮಾಲಾಡಿ ಗ್ರಾಮದ ನಿವಾಸಿ ಲೋಕೇಶ್ ಎಂದು ಗುರುತಿಸಲಾಗಿದೆ.
ಇವರೊಂದಿಗೆ ಆಡುತ್ತಿದ್ದ 7 ಮಂದಿ ಪರಾರಿಯಾಗಿದ್ದು, ಆರೋಪಿಗಳು ಪ್ರಸ್ತುತ ಕೋರೊನಾ ಸಾಂಕ್ರಾಮಿಕ ರೋಗ ಕೋವಿಡ್-19 ನ್ನು ತಡೆಗಟ್ಟುವ ಸಲುವಾಗಿ ಜಿಲ್ಲಾಡಳಿತವು ಜನ ಗುಂಪುಗೂಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರೂ ಕೂಡಾ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಗುಂಪುಗೂಡಿ ಆಟವಾಡಿದ್ದು ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕಲಂ: 87 ಕೆ.ಪಿ ಆಕ್ಟ್ & 269, 270 ಜೊತೆಗೆ 34 ಐಪಿಸಿ ಅಡಿ ಪ್ರಕರಣ ದಾಖಲಾಗಿರುತ್ತದೆ.